ಪರ್ತ್: ಆರಂಭಿಕರನ್ನು ಬೇಗನೆ ಕಳೆದುಕೊಂಡ ಆಘಾತದಲ್ಲಿರುವ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಚೇತರಿಕೆ ನೀಡಿದ್ದಾರೆ.
ಇಬ್ಬರು ಮೂರನೇ ವಿಕೆಟ್‌ಗೆ ಈಗಾಗಲೇ 62 ರನ್ ಪೇರಿಸಿದ್ದಾರೆ. ಭೋಜನ ವಿರಾಮದ ನಂತರ ಭಾರತ 29 ಓವರ‍್ ಎದುರಿಸಿ ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ. ಇನ್ನೂ 256 ರನ್ನುಗಳ ಹಿನ್ನಡೆಯಲ್ಲಿರುವ ಭಾರತಕ್ಕೆ ದೀರ್ಘ ಜತೆಯಾಟದ ಅಗತ್ಯವಿದೆ.