ನಂದಿಬೆಟ್ಟದಲ್ಲಿ ಐಂದ್ರಿತಾ-ದಿಗಂತ್‌ ಮದುವೆ

ಇಲ್ಲಿಯ ಖಾಸಗಿ ರೆಸಾರ್ಟ್‌ನಲ್ಲಿ ತಾರಾ ಜೋಡಿಯ ಸಂಭ್ರಮಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಸಿಂಪಲ್‌ ಆಗಿ ನಿಶ್ಚಿತಾರ್ಥ ಮುಗಿಸಿಕೊಂಡಿದ್ದ ಇವರು ಕುಟುಂಬ ಸದಸ್ಯರು ಹಾಗೂ ಗೆಳೆಯರ ಸಮ್ಮುಖದಲ್ಲಿ ಮದುವೆಯಾದರು. ಎರಡು ದಿನಗಳ ಮದುವೆಯ ವಿಧಿವಿಧಾನದ ಭಾಗವಾಗಿ ಮಂಗಳವಾರ ಅರಿಶಿಣ ಶಾಸ್ತ್ರ ನೆರವೇರಿತ್ತು. ಸಂಗೀತ ಕಾರ್ಯಕ್ರಮಗಳಲ್ಲಿ ಈ ನವ ಜೋಡಿ ನರ್ತಿಸುವುದರ ಮೂಲಕ ಸಂಭ್ರಮ ಹೆಚ್ಚಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವೀಡಿಯೋ ತುಣಕುಗಳು ಹಾಗೂ ಫೋಟೊಗಳು ವೈರಲ್‌ ಆಗಿದ್ದವು.

”ನಾನು ಯಾವತ್ತೂ ನಿನ್ನ ಹಿಂದೆ ಇರುತ್ತೇನೆ ಬೇಬಿ. ನೀನು ಉತ್ತಮ ಮಗಳು, ನಟಿ ಹಾಗೂ ಇಂದಿನಿಂದ ಅತ್ಯುತ್ತಮ ಪತ್ನಿಯಾಗಲಿದ್ದೀಯ. ಇಂದಿನವರೆಗೆ ನಾನು ನಿನ್ನ ಬಾಡಿಗಾರ್ಡ್‌ ಆಗಿದ್ದೆ. ಆದರೆ ಇಂದು ನನ್ನ ಜವಾಬ್ದಾರಿಯನ್ನು ದಿಗಂತ್‌ಗೆ ಹಸ್ತಾಂತರಿಸುತ್ತಿದ್ದೇನೆ,” ಎಂದು ನಟಿ ರಾಗಿಣಿ ಟ್ವೀಟ್‌ ಮಾಡಿದ್ದಾರೆ.

Please follow and like us:

Related posts

Leave a Comment