‘ಕೆಜಿಎಫ್’ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗ್ತಿರುವುದು ಬಾಲಿವುಡ್ ನಲ್ಲಿ ತೀರಾ ಕುತೂಹಲ ಮೂಡಿಸಿದೆ. ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅಭಿನಯದ ‘ಜೀರೋ’ ಸಿನಿಮಾ ಬರ್ತಿರುವುದು ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ.
ಈ ಮಧ್ಯೆ ಶಾರೂಖ್ ಸಿನಿಮಾದ ಎದುರು ಕನ್ನಡ ಸಿನಿಮಾ ಬರ್ತಿದೆ ಎಂದು ಕಾಲೆಳೆದವರು ಇದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಶ್, ಬಾಲಿವುಡ್ ಸಂದರ್ಶನಗಳಲ್ಲಿ ಶಾರೂಖ್ ಬಗ್ಗೆ ಮೆಚ್ಚುಗೆ ಮಾತುಗಳನ್ನೇ ಹೇಳುತ್ತಿದ್ದಾರೆ.