ಅಚಾನಕ್ಕಾಗಿ ಹೋದ ವಾರ ಬಾರ್ಸಿಲೋನಾದ ಗೆಳೆಯರಿಂದ ಕರೆ ಬಂದಿತ್ತು. “ಗುರುದ್ವಾರದಲ್ಲಿ ಊಟ ಮಾಡುತ್ತಿದ್ದೇವೆ, ನೀನು ತೋರಿಸಿಕೊಟ್ಟಿದ್ದು ಒಳ್ಳೆದಾಯ್ತು” ಎಂದು. ಒಂದು ವರ್ಷದ ಹಿಂದೆ ಒಂದಷ್ಟು ಜನ ಗುಂಪು ಕಟ್ಟಿಕೊಂಡು ಪರೀಕ್ಷೆಯ ಸಮಯದಲ್ಲಿ ಅಡುಗೆ ಮಾಡಿಕೊಳ್ಳಲು ಬಿಡುವಿಲ್ಲದೆ, ಹೋಟೆಲಿಗೆ ದುಡ್ಡಿಲ್ಲದೆ ನಾವು ಹೊಕ್ಕಿದ್ದು ಗುರುದ್ವಾರ.
ಬಾರ್ಸಿಲೋನಾದಲ್ಲಿ ಒಂದೇ ಇಸ್ಕಾನ್ ದೇವಾಲಯವಿರುವುದು. ಅಲ್ಲಿ ಫ್ರೀ ಊಟದ ವ್ಯವಸ್ಥೆ ಇಲ್ಲ. ಸೋ ನಾವೊಂದಷ್ಟು ಜನ ಭಾರತೀಯರು ಗುರುದ್ವಾರಕ್ಕೆ ಹೋದೆವು. ನಮ್ಮಂತೆ ಸುಮಾರು ಜನ ವಿದ್ಯಾರ್ಥಿಗಳು ಅಲ್ಲಿ ಬಂದಿದ್ದರು. ಎಲ್ಲರಿಗೂ ಖುಶಿಯಾಗಿ ಊಟ ಬಡಿಸಲಾಯಿತು. ನಮಗೆ ಪರೀಕ್ಷೆ ಎಂದು ಗೊತ್ತಾಗಿ ಮತ್ತೇನೋ ಮಂತ್ರ ಹೇಳಿ, ಆಶೀರ್ವಾದ ಮಾಡಿ ಕಳಿಸಿದರು.