ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ ‘ಮಾಜಿ’ಗಳ ಯುದ್ಧ!

ನವದೆಹಲಿ, ಡಿಸೆಂಬರ್ 19: 2019 ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತಂತೂ ಅಲ್ಲವೇ ಅಲ್ಲ. 2014 ರ ಲೋಕಸಭಾ ಚುನಾವಣೆಗೂ ಮುನ್ನ ಮತ್ತು ಫಲಿತಾಂಶದ ನಂತರ ಎನ್ ಡಿಎ ಯೊಂದಿಗೆ ಸೇರಿಕೊಂಡ ಹಲವು ಪಕ್ಷಗಳು ಇಂದು ಬಿಜೆಪಿಯೊಂದಿಗಿಲ್ಲ.

ಬೇರೆ ಬೇರೆ ಕಾರಣಗಳಿಗೆ ಬಿಜೆಪಿ ಜೊತೆ ಮುನಿಸಿಕೊಂಡಿರುವ ಈ ಎಲ್ಲ ಪಕ್ಷಗಳು ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿಗೆ ಬಹುದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.

NDA ಗೆ ಆಘಾತ: ಕೇಂದ್ರ ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ

ಈ ಮಾತಿಗೆ ಪೂರಕ ಎಂಬಂತೆ ರಾಷ್ಟ್ರೀಯ ಲೋಕ ಸಮತಾ ಪಕ್ಷದ ನಾಯಕ ಉಪೇಂದ್ರ ಕುಶ್ವಾಹ ಇತ್ತೀಚೆಗಷ್ಟೇ ಎನ್ ಡಿಎ ಯಿಂದ ದೂರ ಸರಿದಿದ್ದಾರೆ. ಜೊತೆಗೆ ಎನ್ ಡಿಎ ಮೈತ್ರಿಕೂಟಕ್ಕೆ ‘ಮಾಜಿ’ ಯಾಗಿರುವ ಅವರು ಎನ್ ಡಿಎ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಈಗಾಗಲೇ ಎನ್ ಡಿಎ ಜೊತೆ ಗುರುತಿಸಿಕೊಂಡಿರುವ ಪಕ್ಷಗಳು ಆದಷ್ಟು ಬೇಗ ಎನ್ ಡಿಎ ಯನ್ನು ತೊರೆದು ಬರುವುದು ಒಳಿತು. ಇಲ್ಲವೆಂದರೆ ಬಿಜೆಪಿ ತನ್ನ ಉಪಯೋಗಕ್ಕಾಗಿ ಎನ್ ಡಿಎ ಜೊತೆ ಗುರುತಿಸಿಕೊಂಡ ಎಲ್ಲಾ ಪಕ್ಷಗಳನ್ನೂ ನಾಶ ಮಾಡುತ್ತದೆ ಎಂದು ಕುಶ್ವಾಹ ಹೇಳಿದ್ದಾರೆ.ಲೋಕ ಜನಶಕ್ತಿ 
ಪಾಸ್ವಾನ್ ಗೆ ಕಿವಿಮಾತು

ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ದುರಾಹಂಕಾರವೇ ನಾನು ಎನ್ ಡಿಎಯನ್ನು ತೊರೆಯಲು ಮುಖ್ಯ ಕಾರಣ. ಲೋಕಜನಶಕ್ತಿ ಪಕ್ಷ ಸಹ ಆದಷ್ಟು ಬೇಗ ಎನ್ ಡಿಎಯನ್ನು ತೊರೆಯುವುದು ಒಳಿತು ಎಂದು ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಕಿವಿಮಾತು ಹೇಳಿದರು. ಇಲ್ಲವೆಂದರೆ ಬಿಜೆಪಿಯು ಎಲ್ಲಾ ಸಣ್ಣ ಸಣ್ಣ ಪಕ್ಷಗಳನ್ನೂ ನಾಶಮಾಡುತ್ತದೆ ಎಂದು ಕುಶ್ವಾಹ ಹೇಳಿದ್ದಾರೆ.

Please follow and like us:

Related posts

Leave a Comment