ಹುಚ್ಚ ವೆಂಕಟ್ ಈಗ ‘ಮಡಿಕೇರಿ ಸಿಪಾಯಿ’

ಬೆಂಗಳೂರು.ಡಿ.19 : ಆಗಾಗ ಸಿನಿಮಾ ಬಿಟ್ಟು ಬೇರೆ ವಿಚಾರಗಳಿಗಾಗಿ ಸುದ್ದಿ ಸದ್ದು ಮಾಡುವ ಹುಚ್ಚ ವೆಂಕಟ್, ಇದೀಗ ತಮ್ಮ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಇಷ್ಟು ದಿನ ಲಾಂಗು ಮಚ್ಚು ಹಿಡಿಯುವ ಪಾತ್ರಗಳನ್ನು ಮಾಡಿರುವ ಅವರು ಇದೀಗ ಸಂಪೂರ್ಣ ಪ್ರೇಮಮಯ ಕತೆಯೊಂದಿಗೆ ಬರುತ್ತಿದ್ದಾರೆ.

ಚಿತ್ರದ ಬಗ್ಗೆ

ಈಗಾಗಲೇ ‘ಹುಚ್ಚ ವೆಂಕಟ್’ ಹಾಗೂ ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಹುಚ್ಚವೆಂಕಟ್, ಆನಂತರ ‘ಡಿಕ್ಟೆಕ್ಟರ್ ಹುಚ್ಚವೆಂಕಟ್’, ‘ತಿಕ್ಲಾ ಹುಚ್ಚವೆಂಕಟ್’, ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಈ ನಡುವೆ ಅವರು ಸದ್ದಿಲ್ಲದೇ ‘ಮಡಿಕೇರಿ ಸಿಪಾಯಿ ಹುಚ್ಚ ವೆಂಕಟ್’ ಎಂಬ ಸಿನಿಮಾ ಮಾಡುತ್ತಿದ್ದಾರೆ.

ಚಿತ್ರಕ್ಕೆ ಇಬ್ಬರು ನಾಯಕಿಯರು

ಬಾಲ್ಯದ ದಿನಗಳಿಂದಲೇ ಕೊಡಗಿನ ಬಗ್ಗೆ ಅಪಾರ ಮತ್ತು ವಿಶೇಷ ಗೌರವವನ್ನು ಹೊಂದಿರುವ ಹುಚ್ಚ ವೆಂಕಟ್, ಈಗ ಅಲ್ಲಿಯ ಕಥೆಯನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವು ಇಬ್ಬರು ನಾಯಕಿಯರಿರುವ ಪ್ರೇಮಮಯ ಕಥಾಹಂದರವನ್ನು ಒಳಗೊಂಡಿದ್ದು, ಇಲ್ಲಿ ಭಾರತ ಮತ್ತು ಪಾಕಿಸ್ತಾನ, ಹಿಂದು ಮುಸಲ್ಮಾನರ ನಡುವಿನ ಸಂಬಂಧವನ್ನು ತೋರಿಸುತ್ತಿದ್ದಾರಂತೆ.

ಹುಚ್ಚ ವೆಂಕಟ್ ರ ಬಗ್ಗೆ

2005 ರಲ್ಲಿ ತೆರೆ ಕಂಡಿದ್ದ ‘ಮೆಂಟಲ್ ಮಂಜ’ ಚಿತ್ರದ ಮೂಲಕ ಮೊದಲ ಬಾರಿಗೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ಹುಚ್ಚ ವೆಂಕಟ್, ಆನಂತರ ಕೆಲವು ಸಿನಿಮಾಗಳಿಗೆ ತಮ್ಮದೆಯಾದ ಧ್ವನಿಯನ್ನು ನೀಡಿ ಚಂದನವನದಲ್ಲಿ ಮಿಂಚುತ್ತಿದ್ದಾರೆ.

Please follow and like us:

Related posts

Leave a Comment