ಕೋಲಾರದ ಗಣಿಯಲ್ಲೇ ‘ಕೆಜಿಎಫ್’ ಇಲ್ಲ!!

ಕೋಲಾರ,ಡಿ.19: ಬಹುನಿರೀಕ್ಷೆ ಹುಟ್ಟಿಸಿರುವ ಕೆ.ಜಿ.ಎಫ್. ‌ಚಿತ್ರ ಬಿಡುಗಡೆಗೆ ಕೇವಲ 2 ದಿನಗಳು ಮಾತ್ರ ಬಾಕಿ ಇವೆ.. ಯಶ್ ಈಗಾಗಲೇ ಭಾರೀ ಪ್ರಚಾರ ಎಲ್ಲೆಡೆ ಮಾಡಿದ್ದಾರೆ.. ಇನ್ನು ಕೆಜಿಎಫ್ ತನ್ನ ನಾಡಿನಲ್ಲೇ ಬಿಡುಗಡೆಯಾಗುತ್ತಿಲ್ಲ.. ಇದು ಬಹಳ ನಿರಾಶದಾಯಕ ಸಂಗತಿಯಾಗಿದೆ…

‘ಲಕ್ಷ್ಮೀ’ ಹಾಗೂ  ಒಲಿಂಪಿಯಾ’ ಚಿತ್ರಮಂದಿರ

ಡಿ.21ರಂದು ವಿಶ್ವಾದ್ಯಂತ ಬೆಳಗ್ಗೆಯಿಂದಲೇ ಕೆ.ಜಿ.ಎಫ್​. ಪ್ರದರ್ಶನ ಶುರುವಾಗುತ್ತಿದೆ… ಆದರೆ ಕೋಲಾರದ ಗಣಿ ನಾಡಿನಲ್ಲೇ ಚಿತ್ರ ತೆರೆಕಾಣುತ್ತಿಲ್ಲ.. ಚಿತ್ರದ ಬಾಕ್ಸ್ ಬಜೆಟ್​ ದುಬಾರಿಯಾಗಿರುವುದರಿಂದ ಚಿತ್ರಮಂದಿರದ ಮಾಲೀಕರು ದೂರ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಜಿಎಫ್​ನಲ್ಲಿರುವ ‘ಲಕ್ಷ್ಮೀ’ ಹಾಗೂ ‘ಒಲಿಂಪಿಯಾ’ ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆ ಆಗುತ್ತಿಲ್ಲ.

ಕೆಜಿಎಫ್ ಸೈನೆಡ್ ಗುಡ್ಡದ ಮೇಲೆ ಸಿನಿಮಾ

ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸೇರಿದಂತೆ ಇಡೀ ಚಲನಚಿತ್ರರಂಗ ಸಿನಿಮಾ ಬಿಡುಗಡೆಗೆ ಕಾಯುತ್ತಿದೆ.. ಸುಮಾರು ಎರಡು ತಿಂಗಳ‌ ಕಾಲ ಸತತವಾಗಿ ಕೋಲಾರ ಜಿಲ್ಲೆ ಕೆಜಿಎಫ್ ಸೈನೆಡ್ ಗುಡ್ಡದ ಮೇಲೆ ಸಿನಿಮಾ ಚಿತ್ರೀಕರಣ ನಡೆದಿದೆ.. ಈಗಾಗಲೇ ಅಭಿಮಾನಿಗಳು ಯಾವಾಗ ಡಿ.21 ಬಂದಿಲ್ಲ ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ.. ಈ ಚಿತ್ರವನ್ನು ಪ್ರಶಾಂತ್​ ನೀಲ್​ ನಿರ್ದೇಶಿಸಿದ್ದು, ನಟಿ ಶ್ರೀನಿಧಿ ನಾಯಕಿಯಾಗಿ ಮಿಂಚಲಿದ್ದಾಳೆ..

Please follow and like us:

Related posts

Leave a Comment