ನಿಮ್ಮ ಜಿಲ್ಲೆ

ವಾಯುಪಡೆಗೆ ಇನ್ನಷ್ಟು ಶಕ್ತಿ: ಜಿಸ್ಯಾಟ್- 7ಎ ಉಡಾವಣೆ ಯಶಸ್ವಿ

Published

on

ಶ್ರೀಹರಿಕೋಟಾ, ಡಿಸೆಂಬರ್ 19: ಬಾಹ್ಯಾಕಾಶ ಲೋಕದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಇಸ್ರೋ, ತನ್ನ ಹಿರಿಮೆಗೆ ಮತ್ತೊಂದು ಕಿರೀಟ ಅಂಟಿಸಿಕೊಂಡಿದೆ.

ಸೇನಾ ಸಂವಹನ ಉಪಗ್ರಹ ಜಿಸ್ಯಾಟ್- 7ಎ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನೆಲೆಯಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು.

ಜಿಸ್ಯಾಟ್- 7ಎ 2,250 ಕೆಜಿ ತೂಕ ಹೊಂದಿದ್ದು, ಭಾರತದ 35ನೇ ಸಂವಹನ ಉಪಗ್ರಹವಾಗಿದೆ.

ಭಾರತೀಯ ವಾಯುಪಡೆಯ ವಾಯು ನೆಲೆಗಳ ನಡುವೆ ಸಂಪರ್ಕ ಒದಗಿಸಲು, ಕಾರ್ಯಾಚರಣೆ ನಡೆಸಲು ಮತ್ತು ಸೇನಾಪಡೆಯ ಯುದ್ಧ ವಿಮಾನಗಳು ಹಾರಾಟ ನಡೆಸುವ ವೇಳೆ ಸಂವಹನ ನಡೆಸಲು ಇದು ನೆರವು ನೀಡಲಿದೆ.

ಜಿಸ್ಯಾಟ್- 7ಎ, ಐಎಎಫ್‌ಗಾಗಿಯೇ ಸಿದ್ಧಪಡಿಸಲಾದ ಮೊದಲ ಉಪಗ್ರಹವಾಗಿದೆ. ಇದು ಐಎಎಫ್ ತನ್ನ ಸಂಪನ್ಮೂಲಗಳನ್ನು ಒಗ್ಗೂಡಿಸಲು ಮತ್ತು ಸಂಯೋಜನೆಯನ್ನು ಸುಧಾರಿಸಲು, ಕಾರ್ಯಾಚರಣೆ ವೇಳೆ ಎಲ್ಲ ಕಡೆಗೂ ಏಕರೂಪದ ಸಂದೇಶಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲಿದೆ.

Click to comment

Trending

Exit mobile version