ಭೋವಿ ಜನಾಂಗದ ಪೂರ್ವಭಾವಿ ಸಭೆಗೆ ಕರೆ

ಚಿತ್ರದುರ್ಗ: ಡಿಸೆಂಬರ್ ೨೧: ಚಿತ್ರದುರ್ಗ ಜಿಲ್ಲಾ ಭೋವಿ ಸಂಘದ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜನಾಂಗದ ಸಮಸ್ಯೆಗಳು ಹಾಗೂ ಜಯಂತಿಗಳ ಕುರಿತು ದಿನಾಂಕ ೨೩-೧೨-೨೦೧೮ನೇ ಭಾನುವಾರ ಬೆಳಿಗ್ಗೆ ೧೧:೩೦ಕ್ಕೆ ಬೋವಿ ಗುರುಪೀಠ ಆವರಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಜನಾಂಗದ ಸಮಸ್ಯೆಗಳು ಶ್ರೀ ಸಿದ್ಧರಾಮೇಶ್ವರ ಜಯಂತಿ, ಮಂಜರಿ ಹನುಮಂತಪ್ಪರವರ ಸ್ಮರಣೋತ್ಸವ ಹಾಗೂ ಕಂಟ್ರಾಕ್ಟರ್ ರಾಜಣ್ಣರವರ ಕೊಲೆಗೈದಿರುವ ಕುರಿತು ಪ್ರತಿಭಟನೆಯ ವಿಚಾರಗಳ ಕುರಿತು ಚರ್ಚಿಸಲು ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಜನಾಂಗದ ಮುಖಂಡರು, ತಾಲ್ಲೂಕು ಸಮಿತಿ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಸದಸ್ಯರುಗಳು, ಯುವ ಸಂಘಟನೆಯ ಕಾರ್ಯಕರ್ತರುಗಳು ಭಾಗವಹಿಸಲು ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್ ತಿಳಿಸಿದ್ದಾರೆ

Please follow and like us:

Related posts

Leave a Comment