ಸಂಪುಟ ಸೇರ್ಪಡೆ ಬಗ್ಗೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ : ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆ ಬಗ್ಗೆ ಪಕ್ಷದಿಂದಾಗಲಿ, ಸರ್ಕಾರದಿಂದಾಗಲಿ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ, ನಾನಾಗಿರಬಹುದು, ಬೇರೆಯವರಾಗಿಬರಹುದು ತೊಂದರೆ ಆಗಲ್ಲ, ನಾನು ಎರಡು ವರ್ಷದ ನಂತರ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆ, ಆದರೆ, ಈಗಲೇ ಕೊಟ್ಟಿದ್ದಾರೆ. ನಮ್ಮ ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಜಿಲ್ಲೆಯ ಅಭಿವೃದ್ಧಿಯ ಕಡೆಗೆ ಶ್ರಮಿಸುತ್ತೇವೆ ಎಂದರು.

ಇನ್ನು ಸಂಪುಟದಲ್ಲಿ ಯಾವ ಖಾತೆ ನೀಡುತ್ತಾರೆ ಗೊತ್ತಿಲ್ಲ. ಯಾವುದೇ ಖಾತೆ ನೀಡಿದರೂ ಕೆಲಸ ಮಾಡುತ್ತೇನೆ. ಸಾರ್ವಜನಿಕವಾಗಿ ಒಳ್ಳೆ ಕೆಲಸ ಮಾಡು ಖಾತೆ ನೀಡಿದರೆ ಒಳ್ಳೆಯದು ಎಂದರು.

Please follow and like us:

Related posts

Leave a Comment