Connect with us

ಬೆಂಗಳೂರು ಗ್ರಾಮಾಂತರ

ಸಾಲಮನ್ನಾ ಹಣ ನಿಜವಾದ ರೈತರಿಗೆ ತಲುಪುತ್ತಿಲ್ಲ ಸಾಲಮನ್ನಾ ಹೀಗೂ ಮಾಡಬಹುದು

Published

on

ನೆಲಮಂಗಲ, ಡಿಸೆಂಬರ್ : ೨೨- ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಧಾನ ತಪ್ಪಾಗಿದ್ದು, ಇದು ನಿಜವಾದ ರೈತರಿಗೆ ತಲುಪುತ್ತಿಲ್ಲ, ಸಾಲ ಮನ್ನಾ ಮಾಡುವಾದ ಅದಕ್ಕೆ ಅದರದ್ದೇ ಆದ ಮಾನದಂಡಗಳನ್ನು ಹಾಕಿಕೊಳ್ಳಬೇಕೆಂದು ಅರಿಶಿನಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಆರ್. ಚಂದ್ರಕುಮಾರ್ ತಿಳಿಸಿದರು.
ವಿಸ್ಮಯ ಮಾಧ್ಯಮ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಾಲಮನ್ನಾ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು, ಹಾಲು ಉತ್ಪಾದಕರು ನಿಜವಾದ ರೈತರು, ಇವರನ್ನು ಗುರುತಿಸಿ ಸರ್ಕಾರ ಇವರಿಗೆ ಸಾಲವನ್ನು ಕೊಡಬೇಕು, ಹಾಲು ಉತ್ಪಾದನೆ ಮಾಡುವವರು ಕೇವಲ ಸಣ್ಣ ರೈತರುಗಳೇ ಹೊರತು ದೊಡ್ಡ ರೈತರುಗಳಲ್ಲ, ಹಾಗಾಗಿ ಬಡ ರೈತರುಗಳನ್ನು ಗುರುತಿಸಿ ಅವರಿಗೆ ನೀಡಬೇಕಾಗುತ್ತದೆ. ಅದು ಅಲ್ಲದೆ ಹಾಲು ಉತ್ಪಾದಕರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ. ರಾಗಿ ಮತ್ತು ಜೋಳ ಬೆಳೆಯುವವರಿಗೂ ಅನುಕೂಲ ಮಾಡಿಕೊಡಬೇಕು, ನೀರಾವರಿ ವ್ಯವಸ್ಥೆಯನ್ನು ಕೂಡ ಸರಿಯಾದ ರೀತಿಯಲ್ಲಿ ಮಾಡಿಕೊಡಬೇಕು, ಇದುವರೆಗೂ ಸರ್ಕಾರ ಹೇಳುತ್ತದೆ ಸಾವಿರಾರು ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಆದರೆ ಅದು ನಿಜವಾದ ರೈತರಿಗೆ ತಲುಪುತ್ತಿಲ್ಲ ಎಂದು ಅವರು ತಿಳಿಸಿದರು.

Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

ಸಿಡಿಲು ಬಡಿದು ನಾಲ್ವರ ಸಾವು

Published

on

By

ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ.ಮೊದಲ ಘಟನೆಯಲ್ಲಿ ಮೃತರನ್ನು ಚೆನ್ನಾಪುರಿ ಮತ್ತು ವೀರಣ್ಣ ಎಂದು ಗುರುತಿಸಲಾಗಿದ್ದು, ಹೊಲಗಳಲ್ಲಿ ದನ ಮೇಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮತ್ತೊಂದು ಘಟನೆಯಲ್ಲಿ, ಹರವಡಹಳ್ಳಿಯ ಜರ್ಮಹಳ್ಳಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜಶೇಖರ್ ತಮ್ಮ ಕೃಷಿ ಜಮೀನಿನಿಂದ ಹಿಂದಿರುಗುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಮೂರನೇ ಘಟನೆಯಲ್ಲಿ, ಅಯ್ಯನಹಳ್ಳಿ ಗ್ರಾಮದ ಪತ್ರೆಪ್ಪ ತನ್ನ ಕಿರಾಣಿ ಅಂಗಡಿ ಬಾಗಿಲು ಮುಚ್ಚುತ್ತಿದ್ದಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ತಹಶೀಲ್ದಾರ್ ಮಹಾಬಲೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Continue Reading

ಬೆಂಗಳೂರು

“ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಇಲ್ಲೇ ಬಳಕೆಯಾಗ್ಬೇಕು”

Published

on

By

ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ್ದೇವೆ. ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಹಲವು ಸೂಚನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಘೋಯಲ್ ಜೊತೆ ಮಾತುಕತೆ ಮಾಡಿದ್ದೇನೆ ಎಂದಿದ್ದಾರೆ.

Continue Reading

ಬೆಂಗಳೂರು

ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ

Published

on

By

ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ

ಆಮ್ಲಜನಕ ಕೊರತೆಯಿಂದ ಇನ್ನು ಮುಂದೆ ಯಾವುದೇ ಸಾವು‌ ರಾಜ್ಯದಲ್ಲಿ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ 28 ಜನ ಚಾಮರಾಜನಗರದಲ್ಲಿ ಸತ್ತಿದ್ದಾರೆ. 3 ಜನ ಸತ್ತಿದ್ದಾರೆ ಎಂಬ ಸುಧಾಕರ್ ಹೇಳಿಕೆ ಶುದ್ಧ ಸುಳ್ಳು. ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಬಗ್ಗೆ ಹೇಳಿದ್ದಾರೆ. ಇಟ್ಸ್ ಗುಡ್.‌ ಒಳ್ಳೇದೇ ಮಾಡಿದ್ದಾರೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html deneme bonusu veren sitelercasino sitelerimıknatısmaç izle