ಬೆಂಗಳೂರು ಗ್ರಾಮಾಂತರ

ಸಾಲಮನ್ನಾ ಹಣ ನಿಜವಾದ ರೈತರಿಗೆ ತಲುಪುತ್ತಿಲ್ಲ ಸಾಲಮನ್ನಾ ಹೀಗೂ ಮಾಡಬಹುದು

Published

on

ನೆಲಮಂಗಲ, ಡಿಸೆಂಬರ್ : ೨೨- ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡುವ ವಿಧಾನ ತಪ್ಪಾಗಿದ್ದು, ಇದು ನಿಜವಾದ ರೈತರಿಗೆ ತಲುಪುತ್ತಿಲ್ಲ, ಸಾಲ ಮನ್ನಾ ಮಾಡುವಾದ ಅದಕ್ಕೆ ಅದರದ್ದೇ ಆದ ಮಾನದಂಡಗಳನ್ನು ಹಾಕಿಕೊಳ್ಳಬೇಕೆಂದು ಅರಿಶಿನಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಆರ್. ಚಂದ್ರಕುಮಾರ್ ತಿಳಿಸಿದರು.
ವಿಸ್ಮಯ ಮಾಧ್ಯಮ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಾಲಮನ್ನಾ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು, ಹಾಲು ಉತ್ಪಾದಕರು ನಿಜವಾದ ರೈತರು, ಇವರನ್ನು ಗುರುತಿಸಿ ಸರ್ಕಾರ ಇವರಿಗೆ ಸಾಲವನ್ನು ಕೊಡಬೇಕು, ಹಾಲು ಉತ್ಪಾದನೆ ಮಾಡುವವರು ಕೇವಲ ಸಣ್ಣ ರೈತರುಗಳೇ ಹೊರತು ದೊಡ್ಡ ರೈತರುಗಳಲ್ಲ, ಹಾಗಾಗಿ ಬಡ ರೈತರುಗಳನ್ನು ಗುರುತಿಸಿ ಅವರಿಗೆ ನೀಡಬೇಕಾಗುತ್ತದೆ. ಅದು ಅಲ್ಲದೆ ಹಾಲು ಉತ್ಪಾದಕರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ. ರಾಗಿ ಮತ್ತು ಜೋಳ ಬೆಳೆಯುವವರಿಗೂ ಅನುಕೂಲ ಮಾಡಿಕೊಡಬೇಕು, ನೀರಾವರಿ ವ್ಯವಸ್ಥೆಯನ್ನು ಕೂಡ ಸರಿಯಾದ ರೀತಿಯಲ್ಲಿ ಮಾಡಿಕೊಡಬೇಕು, ಇದುವರೆಗೂ ಸರ್ಕಾರ ಹೇಳುತ್ತದೆ ಸಾವಿರಾರು ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಆದರೆ ಅದು ನಿಜವಾದ ರೈತರಿಗೆ ತಲುಪುತ್ತಿಲ್ಲ ಎಂದು ಅವರು ತಿಳಿಸಿದರು.

Click to comment

Trending

Exit mobile version