ರಾಜ್ಯ

ಸಂಪುಟ ವಿಸ್ತರಣೆ ಕುರಿತು ಬಿಎಸ್ ವೈ ಹೇಳಿದ್ದೇನು..?

Published

on

ಹುಬ್ಬಳ್ಳಿ,ಡಿ.22- ಕಾಂಗ್ರೆಸ್‌ನಲ್ಲಿ ಅತೃಪ್ತಿ ತಾಂಡವಾಡುತ್ತಿದೆ ಈ ಕಾರಣಗಳಿಂದಲ್ಲೇ ಸಂಪುಟ ವಿಸ್ತರಣೆ ಮಾಡುವುದಾಗಿ ಮೂರು ತಿಂಗಳು ಕಾಲಹರಣ ಮಾಡಿದ್ರು ಈಗ ಸಂಪುಟ ವಿಸ್ತರಣೆ ಮಾಡುವದರಿಂದ ಮತ್ತಷ್ಟು ಅಸಮಾಧಾನ ಭುಗಿಲೇಳಲಿದೆ ಎಂದು ಮಾಜಿ ಸಿಎಮ್ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೋಳಿ ಕೈಬಿಟ್ಟಿದ್ದು ಸಾಕಷ್ಟು ಪರಿಣಾಮ ಬೀರಲಿದೆ. ರಾಜ್ಯಪಾಲರು ಇಲ್ಲದ ಕಾರಣ ಇವತ್ತು ಪ್ರಮಾಣ ವಚನ ಆಗುವುದು ಸಂಶಯ, ಮುಂದೆ ಏನಾಗುವುದು ಎಂದು ಕಾದು ನೋಡೋಣ. ಬಿಜೆಪಿಯ 104 ಜನ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡುತ್ತಿದ್ದೇವೆ‌. ಅಸಮಾಧಾನ ಭುಗಿಲೆದ್ದ ಮೇಲೆ ಬಿಜೆಪಿ ಶಾಸಕಾಂಗ ಸಭೆ ಕರೆಯುತ್ತೇವೆ‌.

ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರೈತರ ಸಾಲಮನ್ನಾ ಎಂದು ಹೇಳುತ್ತಾ ಕುಮಾರಸ್ವಾಮಿ ರೈತರಿಗೆ ಟೋಪಿಗೆ ಹಾಕುತ್ತಾ ಬಂದಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರದ ದೋಷಗಳನ್ನು ಎತ್ತಿ ತೋರಿಸದ್ದೆವೆ‌.

ಅಧಿವೇಶನದಲ್ಲಿ ಜ್ವಲಂತ ಸಮಸ್ಯೆಗಳಾದ ಕಬ್ಬು ಬೆಳೆಗಾರರು, ಉತ್ತರ ಕರ್ನಾಟಕದ‌ ಸಮಸ್ಯೆಗಳು, ಬರಗಾಲದ ಬಗ್ಗೆ ವ್ಯಾಪಕ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಸರ್ಕಾರ ಏನೂ ಮಾಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲ ಅಧ್ಯಯನ ಪ್ರವಾಸ ಮಾಡಿ ಸರ್ಕಾರ ಕೊಟ್ಟ ಅಂಕಿ ಅಂಶ ತಪ್ಪು ಎಂದು ಸಾಬೀತು ಮಾಡುತ್ತೇನೆ ಎಂದು ತಿಳಿಸಿದರು.

Click to comment

Trending

Exit mobile version