‘ಪಕ್ಷೇತರ ಶಾಸಕ ಶಂಕರ್ ಗೆ ಬಿಗ್ ಶಾಕ್” : “ದೋಸ್ತಿ ಸರಕಾರದ ಸಚಿವ ಸ್ಥಾನದಿಂದ ಗೇಟ್ ಪಾಸ್!?

ಬೆಂಗಳೂರು: ದೋಸ್ತಿ ಸರಕಾರದಲ್ಲಿ ಅರಣ್ಯ ಖಾತೆ ಪಡೆದುಕೊಂಡಿದ್ದ ಪಕ್ಷೇತರ ಶಾಸಕ ಶಂಕರ್‌ ಅವರನ್ನು ದೋಸ್ತಿ ಸರಕಾರದ ಸಚಿವ ಸಂಪುಟದಿಂದ ಗೇಟ್ ಪಾಸ್ ಅನ್ನು ನೀಡಲಾಗಿದೆ ಎನ್ನಲಾಗಿದೆ.

ಇಂದು ದೋಸ್ತಿ ಸರಕಾರದ ಸಚಿವ ಸಂಪುಟ ಪುನರ‍್ ರಚನೆ ನಡೆಯುತ್ತಿದ್ದು, ಈ ವೇಳೆ ಕಾಂಗ್ರೆಸ್ ನಿಂದ ಹಲವು ಮಂದಿ ಶಾಸಕರ ಹೆಸರು ಕೇಳಿ ಬರುತ್ತಿದೆ. ಈ ವೇಳೆಯಲ್ಲಿ ಅರಣ್ಯ ಸಚಿವರಾಗಿರುವ ಆರ್. ಶಂಕರ್ ಸ್ಥಾನಕ್ಕೆ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಅವರು ನೇಮಕವಾಗಲಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ದೋಸ್ತಿ ಸರಕಾರ ರಚನೆಯಾಗುವ ವೇಳೆಯಲ್ಲಿ ಆರ‍್.ಶಂಕರ‍್ ವರು ಸಮ್ಮಿಶ್ರ ಸರಕಾರವನ್ನು ಬೆಂಬಲಿಸಿ ಅರಣ್ಯ ಸಚಿವರಾದರು. ಇದೇ ವೇಳೆ ಕಾಂಗ್ರೆಸ್ ಸದ್ಯಸತ್ವನ್ನು ಪಡೆದುಕೊಳ್ಳುವಂತೆ ಹಲವು ಮಂದಿ ಸೂಚನೆ ನೀಡಿದ್ದರು. ಆದರೆ ಶಂಕರ್‌ ಒಪ್ಪಿಲ್ಲ ಎನ್ನಲಾಗಿದೆ. ಹೀಗಾಗಿ ಅವರನ್ನು ದೋಸ್ತಿ ಸರಕಾರದಿಂದ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನಲಾಗಿದೆ.

Please follow and like us:

Related posts

Leave a Comment