‘ಸಂಜೆವರೆಗೂ ಕಾದು ನೋಡಿ’ : ಸಿಎಂ ಕುಮಾರಸ್ವಾಮಿ

ಬೆಂಗಳೂರು, ಡಿ.22- ಸಂಜೆವರೆಗೂ ಕಾದು ನೋಡಿ. ಜೆಡಿಎಸ್‍ನವರು ಯಾರು ಸಂಪುಟ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದರು. ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ರಾಜಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಎಂಟು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಲಾಗಿದೆ. ಸಂಜೆ 5.20ಕ್ಕೆ ಗಾಜಿನ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದರು.

ಜೆಡಿಎಸ್‍ನಿಂದ ಯಾರಾಗಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸಂಜೆವರೆಗೂ ಕಾದು ನೋಡಿ, ಏನಾಗಲಿದೆ ಎಂದು ಹೇಳಿ ಅಚ್ಚರಿ ಮೂಡಿಸಿದರು. ಎಂಟು ಜನರ ಪಟ್ಟಿ ನೀಡಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿಗಳು ಸಂಜೆವರೆಗೂ ಕಾದು ನೋಡಿ ಎಂದು ಹೇಳಿರುವ ಮರ್ಮವೇನು? ಸಂಜೆ ವೇಳೆಗೇನಾದರೂ ನಿರ್ಧಾರ ಬದಲಾಗುತ್ತದೆಯೇ, ಜೆಡಿಎಸ್ ಶಾಸಕರು ಸಂಪುಟ ಸೇರಲಿದ್ದಾರೆಯೇ, ಕೊನೆ ಕ್ಷಣದಲ್ಲಿ ಬದಲಾವಣೆಗಳಾಗುತ್ತವೆಯೇ ಎಂದು ಪಕ್ಷದ ವಲಯದಲ್ಲಿ ಮಾತುಗಳು ಕೇಳಿಬಂದವು.

Please follow and like us:

Related posts

Leave a Comment