ಕಡದಾಸನಹಳ್ಳಿ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ


ಶಿಡ್ಲಘಟ್ಟ :ಕ್ರೈಸ್ತರ ಪವಿತ್ರ ಕ್ರಿಸ್ಮಸ್ ಹಬ್ಬದ ಸಂಭ್ರಮದ ಶುರುವಾಗಿದೆ. ಏಸುವಿನ ಆರಾಧಕರಲ್ಲಿ ಹರ್ಷೋಲ್ಲಾಸ ಮನೆ ಮಾಡಿದ್ದು, ಹಬ್ಬಕ್ಕಾಗಿ ಇಲ್ಲಿನ ಕ್ರೈಸ್ತ ಬಾಂಧವರು ಬಿಸುರುಸಿನ ತಯಾರಿ ಮಾಡಿಕೊಂಡು ಹಬ್ಬದಾಚರಣೆಯನ್ನು ಅದ್ದೂರಿಯಾಗಿ ಶುರುವಿಟ್ಟಿದ್ದಾರೆ.
ಕ್ರೈಸ್ತರ ಪಾಲಿಗೆ ಡಿಸೆಂಬರ್ ಪವಿತ್ರ ಮಾಸ, ಕಳೆದೊಂದು ತಿಂಗಳಿಂದ ಹಬ್ಬದ ಪೂರ್ವ ತಯಾರಿ ನಡೆದಿವೆ. ಹಬ್ಬದ ಮುನ್ನಾ ದಿನವಾದ ಬುಧವಾರ ಕೊರೆವ ಚಳಿಯನ್ನು ಲೆಕ್ಕಿಸದೆ ಮಕ್ಕಳು, ಚರ್ಚ್‌ನ ಸಿಬ್ಬಂದಿ ನಸುಕಿನಿಂದಲೇ ತಯಾರಿ ಮಾಡುತ್ತಿದ್ದರು
ಚರ್ಚ್ ಜಗಮಗಿಸುತ್ತಿದೆ.

ಏಸುಕ್ರಿಸ್ತ್ ಜನಿನಿಸಿದ್ದು ಡಿ.25 ಮಧ್ಯರಾತ್ರಿ. ಈ ಕ್ಷಣವನ್ನು ಸಂಭ್ರಮಿಸುವ ಕ್ರಿಸ್ಮಸ್ ಹಬ್ಬವನ್ನು
ಆಚರಿಸಿ ತಮ್ಮ ದೈವವನ್ನು ಸ್ವಾಗತಿಸಿಕೊಳ್ಳುವ ಮೂಲಕ ಕ್ರೈಸ್ತ್ ಸಮುದಾಯದವರು ಬುಧವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪರಮ ಪ್ರಸಾದ ಸಂಸ್ಕಾರ ಕಾರ್ಯಕ್ರಮ ನಡೆಸುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. 

Please follow and like us:

Related posts

Leave a Comment