ಬೆಂಗಳೂರು

ನಾವು ಒಂಥರಾ ಸೆಟ್‌ದೋಸೆ ಕಣ್ರಿ, ರಾಜಣ್ಣರವರನ್ನು ಹಾಡಿ ಹೊಗಳಿದ ಎಸ್.ಆರ್.ವಿಶ್ವನಾಥ್

Published

on

ಬೆಂಗಳೂರು: ರಾಜಣ್ಣರವರು ನಮ್ಮ ಆತ್ಮೀಯ ಸ್ನೇಹಿತ, ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿ, ಸ್ವಯಂಸೇವಕರಾಗಿ ಸಂಘದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ, ಎಲ್ಲದಕ್ಕಿಂತ ಹೆಚ್ಚಾಗಿ ಆತ ನನ್ನ ಆತ್ಮೀಯ ಗೆಳೆಯ, ನಾವು ಪ್ರಾರಂಭದಿಂದಲೂ ಕೂಡ ಸಾಕಷ್ಟು ಕಷ್ಟಪಟ್ಟು ಪಕ್ಷವನ್ನು ಕಟ್ಟಿಕೊಂಡು ಬಂದವರು, ಅವರ ಸೇವೆಯನ್ನು ನಮ್ಮ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವರಿಗೆ ರಾಷ್ಟ್ರೀಯ ತೋಟಗಾರಿಕಾ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಬಹಳ ಸಂತೋಷದ ಸಂಗತಿ ಎಂದರು.  ಪ್ರಾರಂಭದ ಹಂತದಲ್ಲಿ ನಾಗರಾಜರೆಡ್ಡಿ, ರಾಜಣ್ಣ ಹಾಗೂ ನಮ್ಮನ್ನ ಎಲ್ಲರೂ ಸೆಟ್ ದೋಸೆ ಅಂತ ಕರೆತಾ ಇದ್ರು, ಪಕ್ಷದಲ್ಲಿ ರಾಜಣ್ಣ ಅವರದ್ದು ೪೦ ವರ್ಷದ ಸೇವೆ ಇದ್ದು, ಯಾವ ಅಧಿಕಾರವನ್ನು ಕೂಡ ಅವರು ಬಾಯಿ ಬಿಟ್ಟು ಕೇಳಿದ ಉದಾಹರಣೆಗಳಿಲ್ಲ ಎಂದರು.  ಇದೇ ಸಮಯದಲ್ಲಿ ಎಸ್.ಎನ್.ರಾಜಣ್ಣ ಮಾತನಾಡಿ, ನಮ್ಮ ಎಲ್ಲಾ ರಾಜ್ಯ ನಾಯಕರುಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಎಲ್ಲಾ ನಾಯಕರುಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಶಾಸಕರು ನಿಷ್ಟಾವಂತ ಕಾರ್ಯಕರ್ತರಿಗೆ ಏನು ಮಾಡಿಕೊಟ್ಟಿಲ್ಲ ಎಂಬ ದೂರುಗಳು ಸಾಕಷ್ಟು ದಿನದಿಂದ ಕೇಳಿ ಬರುತ್ತಿದ್ದವು, ನಿನ್ನೆ ಮೊನ್ನೆ ಪಕ್ಷಕ್ಕೆ ಬಂದ ಕಡತನಮಲೆ ಸತೀಶ್ ಅವರಿಗೆ ಸ್ಥಾನಮಾನ ಕೊಟ್ಟರು, ವರ್ಷಾನುಗಟ್ಟಲೇ ಜೊತೆಗೆ ಇರುವ ರಾಜಣ್ಣ ಅವರನ್ನು ನಿರ್ಲಕ್ಷ್ಯ ಮಾಡಿದ್ದರೂ ಎಂಬ ವದಂತಿಗಳು ಕೂಡ ಹಬ್ಬಿಕೊಂಡಿದ್ದವು, ಇದೀಗ ರಾಜಣ್ಣ ಅವರಿಗೂ ಕೂಡ ಒಂದು ಸಿಹಿ ಸುದ್ದಿಯನ್ನು ಶಾಸಕ ಎಸ್.ಆರ್.ವಿಶ್ವನಾಥ್ ಕೊಟ್ಟಿದ್ದಾರೆ. ರಾಷ್ಟ್ರೀಯ ತೋಟಗಾರಿಕಾ ನಿರ್ದೇಶಕರನ್ನಾಗಿ ಮಾಡುವ ಮೂಲಕ ಇಷ್ಟು ವರ್ಷ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಸಣ್ಣ ಪ್ರಮಾಣದ ಕೊಡುಗೆ ನೀಡಿದ್ದಾರೆ. ಇದರಿಂದ ಕೊಂಚ ಮಟ್ಟಿಗೆ ಹಳೆಯ ಕಾರ್ಯಕರ್ತರುಗಳು ಯಲಹಂಕ ಕ್ಷೇತ್ರದಲ್ಲಿ ಸಂತೋಷದ ನಗೆ ಬೀರುತ್ತಿದ್ದಾರೆ. ಒಟ್ಟಿನಲ್ಲಿ ಹಳೆಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡುವ ವಿಷಯದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು ಮಾತ್ರ ಸತ್ಯ.

Click to comment

Trending

Exit mobile version