ಸದೃಢ ಸಮಾಜಕ್ಕೆ‌ ನಿರ್ಮಾಣದಲ್ಲಿ‌ ಶಿಕ್ಷಕರ‌ ಪಾತ್ರ ಅಪಾರ

ಸದೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ
      
ಗುಡಿಬಂಡೆ : ಮಕ್ಕಳಲ್ಲಿ ಅಡಗಿರುವ ಕ್ರಿಯಾತ್ಮಕ ಶಕ್ತಿಯನ್ನು ಗುರುತಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿ  ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು ಎಂದು  ಕ.ಸಾ.ಪ ತಾಲೂಕು ಅಧ್ಯಕ್ಷೆ  ಅನುರಾಧ ಆನಂದ ತಿಳಿಸಿದರು
ಗುಡಿಬಂಡೆ ಗಡಿ ಭಾಗದ  ಚೋಳಶೆಟ್ಟಿಹಳ್ಳಿ ಗ್ರಾಮದ ಶ್ರೀರಾಮದೇವಾಲಯದಲ್ಲಿ ನಡೆದ ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಕ್ಷಕ ದೇವರಿಗೆ ಸಮಾನ ಎಂದು  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗಿದೆ. ಯಾವುದೇ ಜಾತಿ, ಮತ, ಪಂಥ, ಗಂಡು, ಹೆಣ್ಣು ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜ ಸುಧಾರಣೆ ಆಗಲು  ಸಾಧ್ಯ. ತಂದೆ ತಾಯಿಯ  ನಂತರ ಅವರ ಜೀವನದ  ಅತ್ಯುನ್ನತ ಸಾಧನೆಗೆ ಗುರುಗಳೇ ಕಾರಣ. ಸಿ.ಎಸ್.ಪ್ರಭಾಕರ್ ರಾವ್ ಮಕ್ಕಳ  ಒಳ್ಳೆಯ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ  ಶಿಕ್ಷಣವನ್ನು ನೀಡಿದ್ದರಿಂದ  ಇಂದು ಅವರು ಶಿಷ್ಯರು ಉನ್ನತಸ್ಥಾನದಲ್ಲಿದ್ದಾರೆ. ಇಂತಹ  ಶಿಕ್ಷಕರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ  ಸ್ವೀಕರಿಸಿ ಮಾತನಾಡಿದ ಸಾಹಿತಿ ನಿವೃತ್ತ ಶಿಕ್ಷಕ ಸಿ.ಎಸ್.ಪ್ರಭಾಕರ್ ರಾವ್,  ಗುಡಿಬಂಡೆ ತಾಲೂಕಿನಲ್ಲಿ  ಕೋಲಾರ ಜಿಲ್ಲೆಯಾಗಿದ್ದಾಗ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಡೆಸಿದ್ದೆವು ಹುತ್ತನೂರು  ರಾಜಮ್ಮರನ್ನು ಸಮ್ಮೇಳನದ ಅಧ್ಯಕ್ಷರಾಗಿದ್ದರು ಈ ಕಾರ್ಯಕ್ರಮದಲ್ಲಿ ಉತ್ತಮ ನಿರ್ವಹಣೆಮಾಡಿದ್ದಾರೆ ಎಂಬ ಪ್ರಶಂಸೆ ನೀಡಿದ್ದರು. ಎಲ್ಲೋಡು ಆದಿನಾರಾಯಣ ಸ್ವಾಮಿ ತಪ್ಪಲಿನಲ್ಲಿ ಸುವರ್ಣ ಮೋತ್ಸವ ಕಾರ್ಯಕ್ರಮವನ್ನು  ಮಾಡಿದ್ದೆವು ಕೂರ್ಮಗಿರಿ ಎಂಬಸ್ಮರಣ ಸಂಚಿಕೆಯನ್ನು  ಬಿಡುಗಡೆ ಮಾಡಿ ಗುಡಿಬಂಡೆ ಪೂರ್ಣಿಮರಿಂದ ಉಪನ್ಯಾಸವನ್ನು ಸಹ  ಮಾಡಿಸಿದ್ದೆವು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ  ಚೋಳಶೆಟ್ಟಿಹಳ್ಳಿ ಗ್ರಾಮದ  ಸಾಹಿತಿ ನಿವೃತ್ತ ಶಿಕ್ಷಕಸಿ.ಎಸ್.ಪ್ರಭಾಕರ್ ರಾವ್ ರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಹಾಗೂ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಘಟಕದ  ಸದಸ್ಯ  ಎನ್. ನಾರಾಯಣಸ್ವಾಮಿ,  ಬಾಗೇಪಲ್ಲಿ ತಾಲೂಕಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿ  ಕಾರ್ಯನಿರ್ವಹಿಸಿದ್ದ  ಆದಿಲಕ್ಷ್ಮಮ್ಮ ಮಾತನಾಡಿದರು.
ಈ ವೇಳೆ ತಾಲ್ಲೂಕು ಕನ್ನಡ  ಸಾಹಿತ್ಯ ಪರಿಷತ್ತಿನ ವಾಹಿನಿ ಎಚ್.ಆರ್.ಸುರೇಶ್,  ವಿ.ಶ್ರೀರಾಮಪ್ಪ, ರಘು,  ಬಿ.ಮಂಜುನಾಥ, ರಾಜೇಶ್, ಮಂಜುನಾಥ ಗಣಪತಿ ಹೆಗಡೆ, ನಾಗಲಿಂಗಪ್ಪ, ಸಿ.ಎ.ಚಲಪತಿ, ವೆಂಕಟಾಚಲಯ್ಯ,  ಸುರೇಶ್ ಜೈನ್, ಶ್ರೀನಿವಾಸ್,  ಕರ್ನಾಟಕ ರಕ್ಷಣಾ ವೇದಿಕೆಯ ಜಿ.ವಿ.ಆನಂದ್, ಶ್ರೀನಿವಾಸ್ ಯಾದವ್ ಸೇರಿದಂತೆ  ಮತ್ತಿರರು ಭಾಗವಹಿಸಿದ್ದರು.

ದೇವರಾಜ್ ಎನ್ ಆರ್ ಚಿಕ್ಕಬಳ್ಳಾಪುರ

Please follow and like us:

Related posts

Leave a Comment