1) ಸುಟ್ಟ ಗಾಯವಾದಾಗ ಬಾಳೆಹಣ್ಣಿನ ಲೇಪ ಹಚ್ಚುವುದು ಒಳ್ಳೆಯದು.
2) ಸುಟ್ಟ ಗಾಯಕ್ಕೆ ಶುದ್ಧ ಜೇನಿನ ಲೇಪ ಹಚ್ಚುವುದರಿಂದ ಕಲೆ ಮಾಯವಾಗುತ್ತದೆ.
3) ಟೀ ಗಿಡದ ಎಣ್ಣೆಯನ್ನು ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಗಾಯ ಗುಣಮುಖವಾಗುತ್ತದೆ.
4) ಬಿಸಿ ಆಹಾರವನ್ನು ಸೇವಿಸಿದಾಗ ನಾಲಗೆ ಸುಟ್ಟು ಹೋಗುತ್ತದೆ. ಆಗ ಉಪ್ಪನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಿದರೆ ಸುಟ್ಟ ನೋವು ಕಡಿಮೆಯಾಗುತ್ತದೆ.
5) ರಾತ್ರಿ ಮಲಗುವ ಮುನ್ನ ಹಾಲನ್ನು ಬಿಸಿ ಮಾಡಿ ಅದಕ್ಕೆ ಅರಿಶಿಣವನ್ನು ಕರಗಿಸಿ ಬೆಳಿಗ್ಗೆ ಹಚ್ಚಿದರೆ ಗಾಯ ಗುಣವಾಗುವುದು.
6) ಪಟಾಕಿ ಸಿಡಿದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ.
7) ಗಾಯವಾದಾಗ ಬೇಯಿಸಿದ ಆಲೂಗೆಡ್ಡೆಯನ್ನು ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚಿದರೆ ಸೋಂಕು ಆಗುವುದನ್ನು ತಡೆಯುತ್ತದೆ.