ನಾಳೆ ಸೀತಾರಾಮ ಕಲ್ಯಾಣ ರಾಜ್ಯಾದ್ಯಂತ ರಿಲೀಸ್ : ಅಬ್ಬರಿಸ್ತಾನಾ ಜಾಗ್ವಾರ್..!

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರ್​ ಸ್ವಾಮಿ ನಟನೆಯ ಸೀತಾರಾಮ ಕಲ್ಯಾಣ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಬರೋಬ್ಬರಿ 400 ಚಿತ್ರಮಂದಿರಗಳಲ್ಲಿ ತೆರೆಗೆಬರ್ತಿದ್ದು, ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಜಾಗ್ವಾರ್​’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿ ನಿಖಿಲ್​, ಇದೀಗ ಸೀತಾರಾಮ್ ಕಲ್ಯಾಣ ಚಿತ್ರ
ಎರಡನೇಯದಾಗಿದೆ. ಈ ಚಿತ್ರ ಮೂರು ವರ್ಷದ ಹಿಂದೆ ತೆರೆಕಂಡಿದ್ದು, ಈಗ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್​ನಲ್ಲಿ ‘ಸೀತಾರಾಮ’ ಹೇಗಿರಲಿದ್ದಾನೆ ಎನ್ನುವ ಚಿಕ್ಕ ಝಲಕ್​ ನಿರ್ದೇಶಕ ಎ. ಹರ್ಷ ಬಿಟ್ಟುಕೊಟ್ಟಿದ್ದಾರೆ. ಈ ಮೊದಲಿನ ಚಿತ್ರದಲ್ಲಿ ಪಕ್ಕಾ ಆ್ಯಕ್ಷನ್​ ಮೆರೆದಿದ್ದ ನಿಖಿಲ್​ ಈ ಬಾರಿ, ಮಾಸ್​ ಜೊತೆ ಫ್ಯಾಮಿಲಿ ಸೆಂಟಿಮೆಂಟ್​ ಕಥೆ ಹಿಡಿದು ಬಂದಿದ್ದಾರೆ.
ಇಡೀ ಕುಟುಂಬವೇ ಕುಳಿತು ಸಿನಿಮಾ ನೋಡಬಹುದು, ಎಂದು ನಿಖಿಲ್​ ಈ ಮೊದಲೇ ಹೇಳಿದ್ರು. ಚಿತ್ರದಲ್ಲಿ ನಿಖಿಲ್​ಗೆ ಜೊತೆಯಾಗಿ ರಚಿತಾ ರಾಮ್​ ಕಾಣಿಸಿಕೊಂಡಿದ್ದಾರೆ. ಇಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕ್​ಔಟ್​ ಆಗಿದೆ ಎಂಬುದು ಟ್ರೈಲರ್​ ನೋಡಿದವರ ಮಾತು. ಶರತ್ ​ಕುಮಾರ್​, ರವಿಶಂಕರ್​, ಚಿಕ್ಕಣ್ಣ ಮೊದಲಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Please follow and like us:

Related posts

Leave a Comment