70ನೇ ಗಣರಾಜ್ಯೋತ್ಸವ- ದೆಹಲಿಯಲ್ಲಿ ಮೊಳಗಿತು ಕನ್ನಡದ ಕಹಳೆ

70 ನೇ ಗಣರಾಜೋತ್ಸವ ಆಚರಣೆಯ ಅಂಗವಾಗಿ ಕರ್ನಾಟಕದಿಂದ ಈ ಬಾರಿ ಗಾಂಧೀಜಿ ಹಾಗೂ ಬೆಳಗಾವಿ
ಕಾಂಗ್ರೆಸ್ ಅಧಿವೇಶನದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೇ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಎಲ್ಲರ ಗಮನಸೆಳೆಯಿತು ಈ ಹಿನ್ನೆಲೆಯಲ್ಲಿ ದೆಹಲಿಯ ರಾಜ್‍ಪಥದಲ್ಲಿ ಕನ್ನಡದ ಕಹಳೆ ಮೊಳಗಿದಂತಾಯಿತು. ಮಹಾತ್ಮ ಗಾಂಧೀಜಿ ಅವರ 150ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ 16 ರಾಜ್ಯಗಳ ಮತ್ತು 6 ಇಲಾಖೆಗಳ ಒಟ್ಟು 22 ಸ್ತಬ್ಧ ಚಿತ್ರಗಳು ಪ್ರದರ್ಶನವಾಯಿತು. ಸ್ತಬ್ಧ ಚಿತ್ರಗಳಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಹಾಗೂ ಕರ್ನಾಟಕದಿಂದ ಈ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶನೆ ಮಾಡಲಾಯಿತು.

Please follow and like us:

Related posts

Leave a Comment