ನಿಮ್ಮ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ..? ಡಿಸಿಎಂ ವಿರುದ್ಧ HDK ಗರಂ

ಬೆಂಗಳೂರು : ನಿಮ್ಮ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ ಮೇಲೆ ಗರಂ ಆಗಿದ್ದಾರೆ.. ಸಿಎಂ ಕುಮಾರಸ್ವಾಮಿ ಕಾಂಗ್ರೆಸ್​ ಶಾಸಕ ಎಸ್​.ಟಿ.ಸೋಮಶೇಖರ್​ ಹೇಳಿಕೆಗೆ ಗರಂ ಆಗಿ ರಾಜೀನಾಮೆ ನೀಡಲು ಸಿದ್ದ ಎಂದು ಕೈ ನಾಯಕರಿಗೆ ವಾರ್ನಿಂಗ್​ ನೀಡಿದ್ದರು. ಈ ಹೇಳಿಕೆ ನೀಡಿದ ಬಳಿಕ ಬಜೆಟ್​ ಸಭೆಯಲ್ಲಿ ಭಾಗವಹಿಸುವ ಮುನ್ನ ಡಿಸಿಎಂ ಪರಮೇಶ್ವರ್​ ಮೇಲೆ ಕಿಡಿಕಾರಿದ್ದಾರೆ. ಕೈ ಶಾಸಕರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಒಬ್ಬರು ಅಭಿವೃದ್ಧಿ ಕಾರ್ಯ ಆಗ್ತಿಲ್ಲ ಅಂತಾರೆ, ಕೆಲವರು ಸಿದ್ದರಾಮಯ್ಯನವರೇ ಸಿಎಂ ಅಂತಾರೆ ಎಂದು ಹೆಚ್ ಡಿಕೆ ಡಿಸಿಎಂ ಪರಮೇಶ್ವರ್​ಗೆ ಸಿಟ್ಟಿನಲ್ಲೇ ಮಾತನಾಡಿದ್ದಾರೆ. ಇನ್ನೂ ಸಮ್ಮಿಶ್ರ ಸರ್ಕಾರ ಬಂದು ಏಳು ತಿಂಗಳಾಗ್ತಿದೆ. ಏನ್ಲೆಲ್ಲಾ ಕಾರ್ಯಕ್ರಮಗಳು ಆಗುತ್ತಿವೆ ಎಂಬುದು ನಿಮಗೂ ಗೊತ್ತು. ನಿಮಗೆ ನಿಮ್ಮ ಪಕ್ಷದ ಶಾಸಕರ ಬಾಯಿ ಮುಚ್ಚಿಸಲು ಆಗಲ್ಲವೇ ಎಂದು ಡಿಸಿಎಂ ವಿರುದ್ದ ಕಿಡಿಕಾರಿದ್ದಾರೆ. ನಿಮ್ಮ ಹೈಕಮಾಂಡ್​ ಜೊತೆಗೆ ಚರ್ಚಿಸ್ತೀನಿ. ಅವರಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಈಗಲೇ ರಾಜೀನಾಮೆ ಕೊಟ್ಟು ಹೋಗ್ತೀನಿ ಎಂದು ಬೇಸರದಿಂದಲೇ ಮಾತನಾಡಿದರು.ಈ ವೇಳೆ ಡಿಸಿಎಂ ಪರಮೇಶ್ವರ್​ ಸಿಎಂ ಕುಮಾರಸ್ವಾಮಿ ಅವರನ್ನು ಸಮಾಧಾನ ಪಡಿಸಿ, ಇನ್ಮುಂದೆ ಯಾರೂ ಈ ತರ ಮಾತನಾಡಲ್ಲ. ನಾನು ಸೋಮಶೇಖರ್​ ಜೊತೆ ಮಾತನಾಡುತ್ತೇನೆ ಎಂದು ಸಮಾಧಾನ ಹೇಳಿದರು.

Please follow and like us:

Related posts

Leave a Comment