ವೇತನ ಕಡಿತ ಮಾಡದಂತೆ ಸಿಎಂ ಸೂಚನೆ

ಬೆಂಗಳೂರು:ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು,ಸಹಾಯಕರು ಮತ್ತು ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಈ ಸಂಬಧ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸಕ್ಕೆ ಬಾರಲು ಸಾಧ್ಯವಾಗದ ಕಾರ್ಮಿಕರ ವೇತನವನ್ನು ಅವರ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ಕಡಿತ ಮಾಡಬಾರದು.ಅಲ್ಲದೆ, ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಕಾರ್ಮಿಕರಿಗೆ, ಕೂಲಿ ಕೆಲಸದವರಿ, ಬಡವರಿಗೆ ಸಹಾನುಭೂತಿಯಿಂದ ನೆರವಾಗಿ ಎಂದು ಮಾಲೀಕರಿಗೆ ತಿಳಿಸಿದ್ದಾರೆ.

Please follow and like us:

Related posts

Leave a Comment