ಬೆಂಗಳೂರು

ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗೆ ಸವಲತ್ತು ನೀಡದ ಸರ್ಕಾರ!

Published

on

ಬೆಂಗಳೂರು:ಕೊರೊನಾ ರೋಗಿಗಳಿಗೆ ಮೀಸಲಿಡುವ ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಗೆ ನೀಡಬೇಕಾದ ಸವಲತ್ತುಗಳ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಮನವಹಿಸದಿರುವುದು ಬಗ್ಗೆ ನರ್ಸ್ಗಳು ಬರೆದ ಪತ್ರದಲ್ಲಿ ಬಹಿರಂಗವಾಗಿದೆ.
ಸದ್ಯ ಪತ್ರದಲ್ಲಿ ಕೊರೊನಾ ರೋಗಿಗಳಿಗಾಗಿ ಇಡೀ ದಿನ ಕೆಲಸ ಮಾಡುವ ನರ್ಸ್ಗಳ ಸುರಕ್ಷತೆ ಬಗ್ಗೆ ಸರಕಾರ ಗಮನಹರಿಸಿಲ್ಲ.
ಈ ಸಮಸ್ಯೆಯನ್ನು ಹೇಳಿಕೊಂಡಿರುವ ನರ್ಸ್ಗಳು ಎರಡನೇ ಬ್ಯಾಚ್ ಆಗಿ ನಿಯೋಜಿಸುವ ನರ್ಸ್ಗಳಿಗೆ ಹೆಚ್ಚು ಸವಲತ್ತುಗಳನ್ನು ನೀಡಬೇಕು ಹಾಗೂ ಅವರ ಕೆಲಸದ ಅವಧಿಯನ್ನು ಬದಲಿಸಬೇಕು ಎಂದು ನರ್ಸ್ಗಳು ಮನವಿ ಮಾಡಿದ್ದಾರೆ.
ಇನ್ನು ನರ್ಸ್ಗಳು ಟ್ರಾಮಾ ಕೇರ್‌ಸೆಂಟರ್‌ನ ವಿಶೇಷ ಅಧಿಕಾರಿಗೆ ಈ ಪತ್ರ ಬರೆದಿದ್ದು,ಕೊರೊನಾ ರೋಗಿಗಳ ಆರೈಕೆ ವೇಳೆ ತಾವು ಎದುರಿಸುತ್ತಿರುವ ಒತ್ತಡ, ಆರೋಗ್ಯ ಸಮಸ್ಯೆಗಳ ಕುರಿತು ಪತ್ರದಲ್ಲಿ ವಿವರಿಸಿದ್ದಾರೆ.

Click to comment

Trending

Exit mobile version