ಕೊರೊನಾ ಬಗ್ಗೆ ರಾಯಚೂರು ಎಸ್ಪಿ ಜಾಗೃತಿ

ರಾಯಚೂರು: ಸಿರಿವಾರ ತಾಲ್ಲೂಕಿನ ಕವಿತಾಳ್ ಪಟ್ಟಣದ ಸಂತೆ ಬಜಾರ್‌ನಲ್ಲಿ ರಾಯಚೂರು ಎಸ್ಪಿ ಸಿ.ವೇದಮೂರ್ತಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಅವರು, ಏ.೧೪ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡಿರುವ ಲಾಕ್‌ಡೌನ್‌ನ್ನು ಎಲ್ಲರು ತಪ್ಪದೇ ಪಾಲಿಸಬೇಕು,ಅನವಶ್ಯಕವಾಗಿ ರಸ್ತೆಯಲ್ಲಿ ಯಾರು ತಿರುಗಾಡಬೇಡಿ, ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಸೂಚನೆ ನೀಡಿದರು.
ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲು ರಾತ್ರಿ ರಸ್ತೆಯ ಮೇಲೆ ನಿಂತು ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು,ಅದಕ್ಕೆ ಎಲ್ಲರ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಕವಿತಾಳ್ ಠಾಣೆ ಪಿಎಸ್‌ಐ ಅಮರೇಶ್ ಸೇರಿದಂತೆ ಪೊಲೀಸ್ ಪೇದೆಗಳ ಹಾಜರಿದ್ದರು.

Please follow and like us:

Related posts

Leave a Comment