ತೃತೀಯ ಲಿಂಗಿಗಳ ನೆರವಿಗೆ ಬಂದ ತಾಲೂಕಾಡಳಿತ

ಹುಬ್ಬಳ್ಳಿ:ಭಿಕ್ಷಾಟನೆಯನ್ನು ನಂಬಿ ಜೀವನ ಸಾಗಿಸುವ ತೃತೀಯ ಲಿಂಗಿಗಳ ಕಷ್ಟಕ್ಕೆ ತಾಲೂಕಾಡಳಿತ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದಿದೆ.
ಸದ್ಯ ಲಾಕ್‌ಡೌನ್‌ನಿಂದಾಗಿ ಹಳೇ ಹುಬ್ಬಳ್ಳಿಯ ಹೆಗ್ಗೇರಿ ಕಾಲೋನಿಯಲ್ಲಿ ವಾಸವಿರುವ ೧೨ ಜನ ತೃತೀಯ ಲಿಂಗದವರು ತಮ್ಮ ಉಪ ಜೀವನ ನಡೆಸುವುದು ಬಹಳ ಕಷ್ಟ ಸಾಧ್ಯವಾಗಿತ್ತು.
ಹೀಗಾಗಿ ಈ ವಿಷಯ ತಿಳಿದ ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ ಹಾಗೂ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ಎಂ.ನಾಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೆ, ತೃತೀಯ ಲಿಂಗಿಗಳಿಗೆ ದಿನನಿತ್ಯ ಉಪಯೋಗಕ್ಕೆ ಅವಶ್ಯವಿರುವಂತಹ ಆಹಾರ ದವಸ ಧಾನ್ಯ, ಮಾಸ್ಕ್ಗಳನ್ನು ವಿತರಣೆ ಮಾಡುವ ಜೊತೆಗೆ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆನೀಡಿದರು.

Please follow and like us:

Related posts

Leave a Comment