ಬೆಂಗಳೂರು: ಮನುಕುಲದ ಹೆಮ್ಮಾರಿ, ಮಹಾಮಾರಿ, ಕೊರೊನಾ ವೈರಸ್ ಮೂಡಿಸಿರೋ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನ ಜನ ಭರ್ಜರಿ ಬೆಂಬಲ ಸೂಚಿಸಿದ್ದಾರೆ.
ಅಂದ ಹಾಗೇ ಇಂದು ರಾತ್ರಿ ೯ ಗಂಟೆಗೆ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದರು.ಅಂತೆಯೇ ದೇಶದ ಜನತೆ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಲ ತುಂಬಲು ಹಾಗೂ ೨೧ ದಿನಗಳ ಲಾಕ್‌ಡೌನ್‌ನಿಂದ ಕಂಗೆಟ್ಟ ಜನರಿಗೆ ಆತ್ಮಸ್ಥೈರ್ಯ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ದೀಪ ಅಭಿಯಾನ ಭರ್ಜರಿ ಯಶಸ್ಸು ಕಂಡಿದೆ.
ಇAದು ರಾತ್ರಿ ೯ ಗಂಟೆಗೆ ಸರಿಯಾಗಿ ದೇಶದ ವಿವಿಧ ರಾಜ್ಯದ ಜನರು ತಮ್ಮ ಮನೆಗಳ ಬಾಗಿಲ ಮುಂದೆ, ಬಾಲ್ಕನಿಗಳಲ್ಲಿ ದೀಪ ಹಿಡಿದು ನಿಂತು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ಘೋಷಿಸಿದರು.
ಇನ್ನು ಎಣ್ಣೆ ದೀಪಗಳು, ಕ್ಯಾಂಡಲ್, ಟಾರ್ಚ್, ಮೊಬೈಲ್ ಫ್ಲಾಷ್ ಲೈಟ್ ಸೇರಿದಂತೆ ಹಲವು ಸಾಧನಗಳನ್ನು ಬಳಸಿಕೊಂಡು ದೀಪ ಬೆಳಗಿದರು.
ಇದೇ ವೇಳೆ ಕೊರೊನಾ ವೈರಸ್ ಹೊಗಲಾಡಿಸಲು ನಮೋ ನೀಡಿದ್ದ ದೀಪ ಕ್ರಾಂತಿಗೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲೂ ಜನರು ಮನೆಯ ಲೈಟ್ ಆಫ್ ಮಾಡಿ ದೀಪ ಬೆಳಗಿಸಿದರು.
ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ದೀಪ ಅಭಿಯಾನ ಭರ್ಜರಿ ಯಶಸ್ಸು ಕಂಡಿದೆ.
ಕರ್ನಾಟಕದಲ್ಲಿ `ದೀಪ’ ಕ್ರಾಂತಿಗೆ ಭರ್ಜರಿ ಯಶಸ್ಸು

Please follow and like us: