ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯಸ್ಥಿತಿ ಗಂಭೀರ

ಬೆಂಗಳೂರು : ಚಂದನವನದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಫೋರ್ಟೀಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯ ಸಮಸ್ಯೆಗೆ ತುತ್ತಾಗಿರುವ ಪ್ರಕಾಶ್ ಅವರಿಗೆ ಗ್ಯಾಂಗ್ರಿನ್ ಕೂಡಾ ಕಾಡುತ್ತಿದೆ. ಈಗಾಗಲೇ ಮೂರು ಆಸ್ಪತ್ರೆಗಳನ್ನು ಬದಲಾಯಿಸಿರುವ ಪ್ರಕಾಶ್ ಶನಿವಾರ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಬುಲೆಟ್​ ಪ್ರಕಾಶ್​ ಕನ್ನಡದ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ದರ್ಶನ್​, ಪುನೀತ್​, ಸಾಧುಕೋಕಿಲ, ಸುದೀಪ್​ ಸೇರಿದಂತೆ ಹಲವಾರು ಸ್ಟಾರ್​ಗಳೊಂದಿಗೆ ನಟಿಸಿದ್ದಾರೆ. ತಮ್ಮ ಹಾಸ್ಯಭರಿತ ನಟನೆಯಿಂದ ಚಿತ್ರಮಂದಿರದಲ್ಲಿ ನಗೆ ಹೊಳೆಯನ್ನೇ ಹರಿಸುತ್ತಿದ್ದ ಬುಲೆಟ್​ ಪ್ರಕಾಶ್​ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಲೆಟ್​ ಓಡಿಸುವ ಕಾರಣಕ್ಕೆ ಇವರನ್ನು ಬುಲೆಟ್​ ಪ್ರಕಾಶ್​ ಎಂದು ಕರೆಯಲಾಗಿತ್ತು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್​, ಇತ್ತೀಚೆಗೆ 35 ಕೆಜಿ. ತೂಕ ಇಳಿಸಿಕೊಂಡಿದ್ದರು ಎನ್ನಲಾಗುತ್ತಿದೆ.

Please follow and like us:

Related posts

Leave a Comment