ಬೈಕ್ ಸವಾರರೇ ಬೀದಿಗಿಳಿತ್ತೀರಾ..ಈಗ್ಲೇ ಯೋಚನೆ ಮಾಡಿ..

ಕೊಪ್ಪಳ: ಇಡೀ ಭಾರತವೇ ಲಾಕ್ ಡೌನ್ ಆಗಿದ್ದರೂ ಜನರು ಅದರಲ್ಲೂ ಬೈಕ್ ಸವಾರರು ಮಾತ್ರ ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿಲ್ಲ.ಹೀಗಾಗಿ ಈ ಬೈಕ್ ಸವಾರರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಲು ಪೊಲೀಸ್ ಇಲಾಖೆ ಹೊಸ ಐಡಿಯಾವೊಂದನ್ನು ಮಾಡಿದೆ.
ಅಂದ ಹಾಗೇ ಈ ಕೊಪ್ಪಳ ಪೊಲೀಸ್ ಇಲಾಖೆ ಇಂತಹದೊAದು ಐಡಿಯಾ ಮಾಡಿದ್ದು,ಸದ್ಯ ಈ ಐಡಿಯಾ ಅಲ್ಲಿ ವರ್ಕ್ಟೌ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇನ್ನು ಬೈಕ್ ಸವಾರರನ್ನು ಮನೆಯಿಂದ ಹೊರಬರದಂತೆ ಎಚ್ಚರಿಸುವ ಸಲುವಾಗಿ ಕೊಪ್ಪಳ ಪೊಲೀಸರು ಮಂಗಳಮುಖಿಯರ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಬಹುಶಃ ಇದುವರೆಗೂ ಲಾಠಿ ಬೀಸಿ ಬೀಸಿ ಹೈರಾಣಗಿರುವ ಪೊಲೀಸರು,ಮನೆಯಲ್ಲಿಯೇ ಇರಿ, ಕೊರೊನಾ ಹೋರಾಟ ಗೆಲ್ಲಿರಿ ಎಂಬ ಸಂದೇಶವನ್ನು ಮಂಗಳಮುಖಿಯರ ಮೂಲಕ ಬೈಕ್ ಸವಾರರಿಗೆ ರವಾನಿಸುತ್ತಿದ್ದಾರೆ.
ಇನ್ನು ಪೊಲೀಸರ ಜೊತೆಗೂಡಿರುವ ಮಂಗಳಮುಖಿಯರು ಕೊಪ್ಪಳದ ಅಶೋಕ ವೃತ್ತದಲ್ಲಿ ಮನೆಯಿಂದ ಬೀದಿಗಿಳಿದ ವಾಹನ ಸವಾರರಿಗೆ ಹಣೆಗೆ ಕುಂಕುಮ ಹಚ್ಚಿದ ಮಂಗಳಮುಖಿಯರ ತಂಡ ರಾಖಿ ಕಟ್ಟಿ ಬುದ್ದಿ ಹೇಳಿದೆ.
ಈ ವೇಳೆ ಮಂಗಳಮುಖಿಯರಿಗೆ ಕೊಪ್ಪಳ ಡಿವೈಎಸ್ಪಿ, ಟೌನ್ ಪಿಐ ಸಾಥ್ ನೀಡಿದರು.

ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment