ದೇಣಿಗೆ ನೀಡಿದಕ್ಕೆ ಪಿಎಂ ಧನ್ಯವಾದ..

ನವದೆಹಲಿ:ಕರೋನಾವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಹಲವು ಚಲನಚಿತ್ರ ತಾರೆಯರು ದೇಣಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ಅಂತರಾಷ್ಟ್ರೀಯ ತಾರೆ ಪ್ರಿಯಾಂಕಾ ಚೋಪ್ರಾ ಸಹ ಪಿಎಂ ಕೇರ್ ಫಂಡ್‌ಗೆ ದೇಣಿಗೆ ನೀಡಿದ್ದಾರೆ.
ಸದ್ಯ ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆ ನೀಡಿದ ನಂತರ ಪ್ರಿಯಾಂಕಾ ಚೋಪ್ರಾ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಸಂವಾದ ನಡೆಸಿದ್ದಾರೆ.
ವಾಸ್ತವವಾಗಿ ಪ್ರಿಯಾಂಕಾ ಚೋಪ್ರಾ ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆ ನೀಡಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ,ಅದು ವ್ಯಕ್ತಿಗಳು ಅಥವಾ ಸಂಸ್ಥೆಗಳು, ಪರಿಶ್ರಮಿ ವೃತ್ತಿಪರರು ಅಥವಾ ಪ್ರಖ್ಯಾತ ವ್ಯಕ್ತಿಗಳೇ ಆಗಿರಲಿ, ಭಾರತದ ಆರೋಗ್ಯಕರ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗೂಡುತ್ತಿದ್ದಾರೆ. ಅಲ್ದೆ.. ಪಿಎಂ ಕೇರ್ಸ್ ಫಂಡ್‌ಗೆ ಕೊಡುಗೆ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ

Please follow and like us:

Related posts

Leave a Comment