ದೇಶ - ವಿದೇಶ

ಗ್ರಾಮದ ಗಡಿ ಕಾಯಲು ಮುಂದಾದ ಸೈನಿಕರು.

Published

on

ಬಾಗಲಕೋಟೆ: ನಮ್ಮ ದೇಶದ ಯೋದರು ಗಡಿ ಕಾಯ್ದು ನಮ್ಮ ರಕ್ಷಣೆ ಮಾಡತ್ತಾರೆ ಅಷ್ಟೆ ಅಲ್ಲ ರಜೆಗೆ ಅಂತ ಬಂದ್ರೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಅದರಿಂದ ಗ್ರಾಮವನ್ನು ಕಾಪಾಡಲು ಪಣತೊಟ್ಟಿದ್ದಾರೆ.
ಹೌದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದಲ್ಲಿ ಯೋಧರÀÄ ಇಡಿ ಗ್ರಾಮವನ್ನೆ ಲಾಕ್ ಡೌನ್ ಮಾಡಿದ್ದಾರೆ. ಹುನ್ನೂರ ಗ್ರಾಮದ ಯೋಧರÀÄ ರಜೆಗೆಂದು ಬಂದಿದ್ದಾರೆ.ಇAತಹ ಸಂಧರ್ಭದಲ್ಲಿ ಇಡೀ ರಾಜ್ಯ ಲಾಕ್‌ಡೌನ್ ಆಗಿದೆ.
ಈ ಸಂದರ್ಭದಲ್ಲಿ ಯೋಧರÀÄ ಸುಮ್ಮನೆ ಕುಳಿತುಕೊಳ್ಳದೇ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಾ ಅದನ್ನು ತಡೆಗಟ್ಟಲು ಪಣತೊಟ್ಟು ಇಡೀ ಗ್ರಾಮವನ್ನೆ ಲಾಕಡೌನ ಮಾಡಿದ್ದಾರೆ.
ಅಲ್ಲದೆ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳು ಹಾಗೂ ಪಡಿತರ ಧ್ಯಾನ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ತಾವೇ ಮಾರ್ಕ್ ಹಾಕಿ ಪ್ರತಿ ವಾರ್ಡ್ಗೆ ಮೂರು ಜನರಂತೆ ನೇಮಕ ಮಾಡಿ ಗ್ರಾಮವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಶ್ಯಾಮ್ ತಳವಾರ್ ಎಕ್ಸ್ ಪ್ರೆಸ್ ಟಿವಿ ಜಮಖಂಡಿ (ಬಾಗಲಕೋಟೆ)

Click to comment

Trending

Exit mobile version