ಬಾದಾಮಿಯಲ್ಲಿ 1.66 ಲಕ್ಷ ಉಚಿತ ಮಾಸ್ಕ್ ವಿತರಣೆ

ಬಾಗಲಕೋಟೆ : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಜನರ ಆರೋಗ್ಯದ ದೃಷ್ಟಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ೧.೬೬ ಲಕ್ಷ ಮಾಸ್ಕ್ಗಳ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರ ಅಭಿಮಾನಿ ಬಳಗದಿಂದ ಬಾದಾಮಿಯಲ್ಲಿ ೧ ಲಕ್ಷದ ೬೬ ಸಾವಿರ ಜನರಿಗೆ ಉಚಿತ ಮಾಸ್ಕ್ಗಳನ್ನು ವಿತರಿಸಲು ಯೋಚಿಸಲಾಗಿದೆ. ಈಗಾಗಲೇ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಅಧಿಕಾರಿಗಳಿಗೆ ಮಾಸ್ಕ್ಗಳನ್ನು ಹಸ್ತಾಂತರಿಸಲಾಗಿದೆ. ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಒಂದು ಮನೆಗೆ ೨ ಉಚಿತ ಮಾಸ್ಕ್ ನೀಡಲಾಗುವುದು.
ಬದಾಮಿ ಕ್ಷೇತ್ರದ ೧೧೪ ಗ್ರಾಮ, ಬಾದಾಮಿ, ಗುಳೇದಗುಡ್ಡ, ಕೆರೂರು ಪಟ್ಟಣಗಳಲ್ಲಿ ಉಚಿತ ಮಾಸ್ಕ್ ವಿತರಣೆ ಮಾಡಲಾಗುವುದು. ಬದಾಮಿ ಕ್ಷೇತ್ರದಲ್ಲಿ ಅಂದಾಜು ೧ ಲಕ್ಷಕ್ಷೂ ಹೆಚ್ಚು ಕುಟುಂಬಗಳು ವಾಸವಾಗಿವೆ.ಪ್ರತಿ ಕುಟುಂಬಕ್ಕೂ ಎರಡೆರಡು ಮಾಸ್ಕ್ ವಿತರಣೆ ಮಾಡಲಾಗುವುದು. ಹೀಗಾಗಿ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಶ್ರೀಧರ್ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment