ಸಿಂಧನೂರಿನ ಬೈಕ್ ಸವಾರರಿಗೆ ಬಸ್ಕಿ ಶಿಕ್ಷೆ!

ಸಿಂಧನೂರು: ಕೊರೊನಾ ಎಂಬ ಮಾರಣಾಂತಿಕ ವೈರಸ್‌ಗೆ ದೇಶ ದೇಶವೇ ಸ್ತಬ್ಧವಾಗಿದೆ.
ಸದ್ಯ ಈ ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಿ ಅವರೇ ಇಡೀ ದೇಶದ ಲಾಕ್ ಡೌನ್‌ಗೆ ಕರೆ ಕೊಟ್ಟಿದ್ದಾರೆ.
ಆದರೆ ಸಿಂಧನೂರಿನಲ್ಲಿ ಮಾತ್ರ ಅದ್ಯಾಕೋ ಬೈಕ್ ಸವಾರರು ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿದ್ದಾರೆ.ಹೀಗಾಗಿ ಪೊಲೀಸರು ಇದೀಗ ಆ ಸವಾರರ ಬೈಕ್‌ಗಳನ್ನ ವಶಪಡಿಸಿಕೊಂಡು ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟು ಮನೆಯಲ್ಲೇ ಇರಿ,ರಸ್ತೆಗಿಳಿಯಬೇಡಿ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ನು ಸಿಂಧನೂರು ನಗರ ಪೋಲಿಸ ಠಾಣೆಯಲ್ಲಿ ಒಟ್ಟು ಸುಮಾರು ೭೦ ಬೈಕ್‌ಗಳನ್ನು ಪಿಎಸ್‌ಐ ವಿಜಯ ಕೃಷ್ಣ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು (ರಾಯಚೂರು)

Please follow and like us:

Related posts

Leave a Comment