ಕೇಬಲ್ ಆಪರೇಟರ್ಗಳಿಗೆ ಎಲ್ಲರು ಸಹಕರಿಸಿ..ಗೌರವಿಸಿ..

ಕರ್ನಾಟಕ: ಕೊರೊನಾ(ಕೋವಿಡ್-೧೯)ನಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ದು, ಸಾರ್ವಜನಿಕರೆಲ್ಲ ತಮ್ಮ ಕೆಲಸವನ್ನು ಬದಿಗಿಟ್ಟು ಮನೆಯಲ್ಲೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಇಂತಹ ಸಮಯದಲ್ಲಿ ಮನೆಯಲ್ಲಿ ಕುಳಿತು ಸಮಯ ಕಳಿಯಲು ಟಿವಿ ಬಹುಮುಖ್ಯ.ಹೀಗಾಗಿ ಎಲ್ಲಾ ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಸಾರ್ವಜನಿಕರಿಗೆ ತಲುಪುವಂತೆ ಕೇಬಲ್ ಟಿವಿ ಸುದ್ದಿ ಮತ್ತು ಮನರಂಜನೆಯನ್ನು ನೀಡುತ್ತಿದೆ.
ಅದರಲ್ಲೂ ಭಾರತ ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಸುದ್ದಿ ಮತ್ತು ಮನರಂಜನೆಯ ವಾಹಿನಿಗಳ ಗುಣಮಟ್ಟದ ಪ್ರಸಾರ ಸೇವೆ ನೀಡಲು ಕೇಬಲ್ ಆಪರೇಟರ್ಸ್ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ದೇಶದಲ್ಲಿ ಕೊರೊನಾ ಅಂತಹ ಮಹಾಮಾರಿ ರುದ್ರ ತಾಂಡವ ಆಡುತ್ತಿದ್ದರೂ ತಮ್ಮ ಆರೋಗ್ಯ ಲೆಕ್ಕಿಸದೆ ಕೇಬಲ್ ಆಪರೇಟರ್ಸ್ , ಟೆಕ್ನಿಷಿಯನ್ಸ್ ದೇಶಕ್ಕೆ ಅತೀ ದೊಡ್ಡ ಕೊಡುಗೆ ನೀಡುತ್ತಿದ್ದಾರೆ.
ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿಯಲ್ಲೂ ಕೇಬಲ್ ಆಪರೇಟರ್ಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಎಲ್ಲಾ ಕೇಬಲ್ ಆಪರೇಟರ್ಗಳಿಗೆ `ಎಕ್ಸ್ಪ್ರೆಸ್ ವಾಹಿನಿ’ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತಿದೆ.
ಇದರ ಜೊತೆಗೆ ಕೆಲಸದ ಒತ್ತಡದ ಮಧ್ಯೆಯೂ ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ.ಮುಖ್ಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವುದನ್ನು ಮರೆಯಬೇಡಿ ಎಂಬುದನ್ನು ನಮ್ಮ ವಾಹಿನಿ ನೆನಪಿಸಲು ಬಯಸುತ್ತದೆ.
ಇದಲ್ಲದೆ,ಜನರು ಕೂಡ ಕೇಬಲ್ ಆಪರೇಟರ್ಗಳನ್ನು ಗೌರವಿಸುವುದರ ಜೊತೆಗೆ ಕೇಬಲ್ ಸಮಸ್ಯೆ ಪರಿಹರಿಸಲು ಅವರುಗಳಿಗೆ ಸಹಕರಿಸುವಂತೆ ನಮ್ಮ ವಾಹಿನಿವತಿಯಿಂದ ಜನರಲ್ಲಿ ಮನವಿ ಮಾಡುತ್ತೇವೆ.
ಇದೆಲ್ಲದಕ್ಕಿಂತ ಪ್ರಮುಖವಾಗಿ ಜನರು ತಿಂಗಳ ಕೇಬಲ್ ಶುಲ್ಕ ಕಟ್ಟಲು ಆಗದಿದ್ದಾಗ ಕೇಬಲ್ ಆಪರೇಟರ್ಗಳನ್ನು ಸಂಪರ್ಕಿಸಿ ಅವರಿಂದ ಕಾಲಾವಕಾಶ ಪಡೆದುಕೊಳ್ಳಬಹುದು.ಆ ಸಂದರ್ಭದಲ್ಲಿ ಕೇಬಲ್ ಆಪರೇಟರ್ಗಳು ನಿಮಗೆ ಸಮಯಾವಕಾಶ ನೀಡಿ ಸಹಕರಿಸುತ್ತಾರೆ.
ಜೊತೆಗೆ ನಿಮ್ಮ ಕೇಬಲ್ ಸಂಪರ್ಕ ಕಡಿತಗೊಳಿಸುವುದಿಲ್ಲ. ಆದರೆ ಡಿಟಿಎಚ್ನಲ್ಲಿ ಇಂತಹ ಸಮಯಾವಕಾಶವಾಗಲಿ,ಸೇವೆಯಾಗಲಿ ದೊರೆಯುವುದಿಲ್ಲ,ಬದಲಿಗೆ ಡಿಟಿಎಚ್ನ ಶುಲ್ಕ ಕೊನೆಗೊಳುತ್ತಿದ್ದಂತೆ ನಿಮಗೆ ಸುದ್ದಿ ಮತ್ತು ಮನರಂಜನೆ ಸಿಗುವುದು ನಿಂತುಹೋಗಿ ಶುಲ್ಕ ಪಾವತಿ ಬಳಿಕ ಮತ್ತೆ ಸೇವೆ ಆರಂಭಗೊಳ್ಳುತ್ತದೆ.ಆದರೆ ಕೇಬಲ್ನಲ್ಲಿ ಮಾತ್ರ ಇಂಥಹ ತುರ್ತು ಸಂದರ್ಭದಲ್ಲೂ ಶುಲ್ಕ ಪಾವತಿಗೆ ಕಾಲಾವಕಾಶ ನೀಡಿ ದಿನ ನಿತ್ಯವೂ ಸೇವೆ ದೊರೆಯುತ್ತದೆ.ಹಾಗಾಗಿ ಎಲ್ಲಾ ಸಾರ್ವಜನಿಕರು ಇದನ್ನು ತಪ್ಪದೇ ಪಾಲಿಸಲು ಮನವಿ.

Please follow and like us:

Related posts

Leave a Comment