ಗದಗದಲ್ಲಿ ಕೊರೊನಾಗೆ ವೃದ್ಧೆ ಬಲಿ..

ಗದಗ: ಗದಗನಲ್ಲಿ ಕೊರೋನಾ ಸೋಂಕಿತ ೮೦ ವರ್ಷದ ವೃದ್ದೆ ಸಾವನಪ್ಪಿದ್ದಾಳೆ. ಗದಗ ನಗರದ ರಂಗನವಾಡಿ ಗಲ್ಲಿಯ ೮೦ ವರ್ಷದ ವೃದ್ದೆಗೆ ಎರಡು ದಿನಗಳ ಹಿಂದೆ ಸೋಂಕು ಇರುವುದು ದೃಢಪಟ್ಟಿತ್ತು. ಗದಗನ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆಯು ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ವೃದ್ದೆ ಸಾವನಪ್ಪಿದ್ದಾಳೆ. ಇನ್ನು ಗದಗ ಜಿಲ್ಲಾಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು ಏಪ್ರಿಲ್ ೪ ರಂದು ವೃದ್ಧೆಯನ್ನ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ ೭ ರಂದು ವೃದ್ದೆಗೆ ಸೋಂಕು ಇರುವುದು ದೃಢಪಟ್ಟ ವರದಿಯಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಿಸದೆ ವೃದ್ದೆ ಸಾವನ್ನಪ್ಪಿದ್ದಾಳೆ. ಇನ್ನು ಜಿಲ್ಲೆಯ ಜನರಲ್ಲಿ ಆತಂಕ ಛಾಯೆ ಮೂಡಿಸಿದೆ, ಯಾರ ಸಂಪರ್ಕವೂ ಇರದ ವೃದ್ದೆಗೆ ಸೋಂಕು ತಗುಲಿರುವುದಾದ್ರೂ ಹೇಗೆ ಅನ್ನೋದೆ ಒಂದು ಸೋಜಿಗದ ಮತ್ತು ಆತಂಕದ ಸಂಗತಿಯಾಗಿದೆ. ಇನ್ನು ನಿನ್ನೆಯಷ್ಟೆ ಅಜ್ಜಿ ಸಂಪರ್ಕದಲ್ಲಿದ್ದ ೪೩ ಜನರ ವರದಿಯೂ ನೆಗೆಟಿವ್ ಅಂತ ಬಂದಿತ್ತು. ಆದ್ರೆ ವೃದ್ದೆಗೆ ಸೋಂಕು ದೃಢಪಟ್ಟಿದ್ದು ಹೇಗೆ ಅನ್ನೋದೆ ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ. ಇನ್ನು ವೃದ್ದೆಯ ಅಂತ್ಯಕ್ರಿಯೆ ಬಗ್ಗೆ ಜಿಲ್ಲಾಡಳಿತ ಚರ್ಚೆ ನಡೆಸುತ್ತಿದೆ. ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ವೃದ್ಧೆಯ ಅಂತ್ಯ ಸಂಸ್ಕಾರ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment