ಏ.30ರವರೆಗೆ ಲಾಕ್‌ಡೌನ್ ಮುಂದುವರೆಸಿ ಆದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ೨೧ ದಿನಗಳ ಲಾಕ್ ಡೌನ್ ಏಪ್ರಿಲ್ ೧೪ರಂದು ಅಂತ್ಯಗೊಳ್ಳಲಿರುವ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಏಪ್ರಿಲ್ ೩೦ರವರೆಗೆ ಲಾಕ್ ಡೌನ್ ಮುಂದುವರಿಸುವAತೆ ಆದೇಶ ಹೊರಡಿಸಿದ್ದಾರೆ.
ಅಂದ ಹಾಗೇ ಕೋವಿಡ್ ೧೯ ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಚರ್ಚೆ ನಡೆಸಿದ್ದರು.ಇದಾದ ಬಳಿಕ ಶನಿವಾರ ನಡೆಯಲಿರುವ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಲಾಕ್ ಡೌನ್ ಗೆ ಸಂಬAಧಿಸಿದ ಅನುಮಾನಕ್ಕೆ ಉತ್ತರ ದೊರೆಯಲಿದೆ.
ಆದರೆ ಅದರೊಳಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಏಪ್ರಿಲ್ ೩೦ರವರೆಗೆ ಲಾಕ್ ಡೌನ್ ಮುಂದುವರಿಸುವAತೆ ಆದೇಶಿಸಿದ್ದಾರೆ.
ಇದೇ ವೇಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ೧೫ ಪ್ರಮುಖ ಹಾಟ್ ಸ್ಪಾಟ್ ಗಳನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದ್ದು, ಕೋವಿಡ್ ೧೯ ವೈರಸ್ ತಡೆಯಲು ಎಲ್ಲರೂ ಕೈಜೋಡಿಸಬೇಕೆಂದು ಸೂಚಿಸಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment