ಬೆಂಗಳೂರು ಫುಲ್ ಸೀಲ್‌ಡೌನ್?

* ಜನ ವಿರೋಧಿ ಕ್ರಮಕ್ಕೆ ಕೈ ಹಾಕಿತ್ತಾ ಬಿಜೆಪಿ ಸರ್ಕಾರ..!* ಸಿಎಂ ತಲೆಗೆ ಸೀಲ್‌ಡೌನ್ ಹುಳ ಬಿಟ್ಟ್ಟವರು ಯಾರು..!!?

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ನಿನ್ನೆ ವೃದ್ಧನೋರ್ವ ಬಾಗಲಕೋಟೆಯಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದ.ಇಂದು ಗದಗದಲ್ಲಿ ವೃದ್ಧೆ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ ೬ಕ್ಕೆ ಏರಿಕೆಯಾಗಿದೆ. ಜತೆಗೆ ಸೋಂಕಿತರ ಸಂಖ್ಯೆಯೂ ೧೯೧ಕ್ಕೇರಿದೆ.
ಹೀಗಾಗಿ ಇವೆಲ್ಲದರಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ ೧೮ ಜಿಲ್ಲೆಗಳನ್ನು ಕೊರೋನಾ ಹಾಟ್‌ಸ್ಪಾಟ್ ಕೇಂದ್ರಗಳಾಗಿ ಗುರುತಿಸಿದೆ ಎಂದು ತಿಳಿದು ಬಂದಿದೆ.
ಸದ್ಯ ಈ ೧೮ ಜಿಲ್ಲೆಗಳ ಪೈಕಿ ಬೆಂಗಳೂರನ್ನು ಪೂರ್ಣವಾಗಿ ಸೀಲ್‌ಡೌನ್ ಮಾಡುವ ಸಂಬAಧ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು,ಏ.೧೪ರನಂತರ ಇಂತಹ ನಿರ್ಧಾರಕ್ಕೆ ಕೈಹಾಕಲಿದೆ ಎಂದು ಕೆಲ ಮೂಲಗಳು ಹೇಳಿವೆ.
ಇನ್ನು ಬೆಂಗಳೂರು ಸೀಲ್‌ಡೌನ್ ಆದರೇ ಒಬ್ಬರೂ ಕೂಡ ಮನೆಯಿಂದ ಹೊರಬರದಂತೆ ಆಗಲಿದ್ದು,ಸರ್ಕಾರಿ ನೌಕರರು, ಮಾಧ್ಯಮಗಳ ಮಂದಿ ಕೂಡ ಮನೆಯಿಂದ ಹೊರಬರದಂತೆ ಆಗಲಿದೆ ಎಂದು ಹೇಳಲಾಗಿದೆ.ಈ ಮೂಲಕ ಮಾಧ್ಯಮಗಳನ್ನು ಕಟ್ಟಿಹಾಕಲು ರಾಜ್ಯ ಸರ್ಕಾರ ಹೊಸ ಪ್ಲಾನ್ ಹುಡುಕಿದೆ ಎನ್ನಲಾಗಿದೆ.
ಇನ್ನು ಸೀಲ್‌ಡೌನ್ ಆದ ನಂತರ ಬೆಂಗಳೂರಿಗರಿಗೆ ಅಗತ್ಯ ವಸ್ತುಗಳು ಬೇಕಾದರೇ ಅದನ್ನು ಬಿಬಿಎಂಪಿ ಸಿಬ್ಬಂದಿಯೇ ಪೂರೈಸಲಿದೆ ನ್ನಲಾಗಿದ್ದು,ಮೆಡಿಕಲ್ ಶಾಪ್‌ಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಸೀಲ್‌ಡೌನ್ ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಈಗಾಗಲೇ ಎಲ್ಲಾ ಮೇಲ್ಸುತುವೆ ಹಾಗೂ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದ್ದು,ಏ.೧೪ರ ನಂತರ ಮನೆಯಿಂದ ಜನರು ಹೊರಬಂದರೆ ಅವರ ಮೇಲೆ ಕೇಸ್ ಹಾಕಲು ಸರ್ಕಾರ ತೀರ್ಮಾನಿಸುತ್ತಿದೆ ಎಂದು ಹೇಳಲಾಗಿದೆ.
ಒಟ್ಟಾರೆ ಬೆಂಗಳೂರು ಕರ್ನಾಟಕ ಕೊರೊನಾದ ಹಾಟ್‌ಸ್ಪಾಟ್ ಆಗಿ ಪರಿವರ್ತನೆಗೊಂಡಿರುವ ಪರಿಣಾಮ ರಾಜ್ಯ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದ್ದು,ಒAದು ವೇಳೆ ಈ ತರಹದ ನಿರ್ಧಾರಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment