ಆರೋಗ್ಯ / HEALTH

ಬೆಂಗಳೂರು ಸೀಲ್‌ಡೌನ್;ಬಿಬಿಎಂಪಿ-ಪೊಲೀಸ್ ಇಲಾಖೆ ನಡುವೆ ಗೊಂದಲ..!

Published

on

ಬೆAಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಸೀಲ್‌ಡೌನ್ ಮಾಡುವ ವಿಷಯದಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಇಲಾಖೆ ಗೊಂದಲಕ್ಕೀಡಾಗಿವೆಯೇ ಎಂಬ ಪ್ರಶ್ನೆ ಎದ್ದಿದೆ.
ಸದ್ಯ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೀಲ್ ಡೌನ್ ಬಗ್ಗೆ ಬೇರೆ ಬೇರೆ ಹೇಳಿಕೆಗಳನ್ನು ನೀಡಿದ್ದು,ಇದು ನಿಜಕ್ಕೂ ಜನರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳಿದೆ.
ಅಂದ ಹಾಗೇ ಇಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಬೆಂಗಳೂರಿನ ಬಾಪೂಜಿ ನಗರ ವಾರ್ಡ್ ೧೩೪ & ಪಾದರಾಯನಪುರ ವಾರ್ಡ್ ೧೩೫ರಲ್ಲಿ ಕೋವಿಡ್೧೯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಪರಿಸ್ಥಿತಿಯನ್ನು ನಿಯಂತ್ರಣ ತರಲು ಈ ೨ ವಾರ್ಡ್ ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲು ಯೋಜಿಸಿದೆ. ಈ ವಾರ್ಡ್ ಗಳಿಗೆ ಅಗತ್ಯವಿರುವ ಎಲ್ಲಾ ವಸ್ತುಗಳ ಸರಬರಾಜು ಬಿಬಿಎಂಪಿ ಮಾಡಲಿದೆ ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಕಡೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್,ತಮ್ಮ ಟ್ವೀಟರ್‌ನಲ್ಲಿ ಬೆಂಗಳೂರು ಸೀಲ್ ಡೌನ್ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಆದರೆ ಇದು ಸುಳ್ಳು ಸುದ್ದಿಯಾಗಿದೆ. ಸದ್ಯಕ್ಕೆ ನಿರ್ಧಾರವಿಲ್ಲ, ಬೆಂಗಳೂರಿನ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ನಿಜಕ್ಕೂ ಬೆಂಗಳೂರು ಸೀಲ್‌ಡೌನ್ ಆಗುತ್ತಾ?ಆದರೆ ಬೆಂಗಳೂರಿನ ಯಾವ ಪ್ರದೇಶಗಳು ಸೀಲ್‌ಡೌನ್ ಆಗಲಿವೆ?ಸೀಲ್ ಡೌನ್ ಬಗ್ಗೆ ಬಿಬಿಎಂಪಿ ಹೇಳಿದ್ದು ನಿಜನಾ?ಅಥವಾ ಪೊಲೀಸ್ ಇಲಾಖೆ ಹೇಳುತ್ತಿರೋದು ಸತ್ಯನಾ?ಅನ್ನೋದನ್ನು ಸಿಎಂ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಬೇಕಾಗಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version