ಶಿರಾದಲ್ಲಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ವಿತರಣೆ..

ಶಿರಾ : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅಗತ್ಯ ಕಿಟ್, ಸಲಕರಣೆ ವಿತರಣೆ ಮಾಡಿದ್ದಾರೆ.
ಶಿರಾದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕೋವಿಡ್-೧೯ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕಿನ ತೆಗೆದುಕೊಂಡ ಕ್ರಮಗಳ ಪರಿಶೀಲನಾ ಸಭೆ ವೇಳೆ ವೈದ್ಯಕೀಯ, ನಗರಸಭೆ, ಬೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೇರಿದಂತೆ ಆರೋಗ್ಯ ಸಹಾಯಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ೧೮೦೦ ಮಾಸ್ಕ್, ೬೦೦ ಸ್ಯಾನಿಟೈಸರ್,೪೦೦ ಹ್ಯಾಂಟ್ ಗ್ಲೌಜ್ ವೈಯಕ್ತಿಕವಾಗಿ ವಿತರಣೆ ಮಾಡಿದರು. ಈ ವೇಳೆ ಸಭೆಯಲ್ಲಿ ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಂದ ತಾಲೂಕಿನ ಮಾಹಿತಿ ಪಡೆದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ (ತುಮಕೂರು)

Please follow and like us:

Related posts

Leave a Comment