ಲಾಕ್‌ಡೌನ್ ಮುಗಿಯಲ್ಲ, ಅಲೆಮಾರಿಗಳು ಹಸಿವಿನಿಂದ ಸತ್ತರೂ ಅನುಮಾನವಿಲ್ಲ..!

ಸಿಂಧನೂರು: ಲಾಕ್‌ಡೌನ್‌ನಿಂದ ಇಡೀ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ರಾಜ್ಯದಲ್ಲಿ ಇಂಥಾ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ.
ಈಗಾಗಲೇ ಹಸಿವಿನಿಂದ ಕೆಲ ಮಂದಿ ಸತ್ತರೇ,ಆಹಾರವಿಲ್ಲದೇ ಸಾವಿರಾರು ಮಂದಿ ಹಸಿವಿನಿಂದ ಬಳಲುತ್ತಿದ್ದು,ರಾಯಚೂರು ಜಿಲ್ಲೆಯಲ್ಲಿ ಈ ವಿಷಯದಲ್ಲಿ ಮೊದಲ ಸ್ಥಾನಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ.
ಸದ್ಯ ಈ ಜಿಲ್ಲೆಯಲ್ಲಿ ಬಡವರು,ನಿರ್ಗತಿಕರು,ಮಂಗಳಮುಖಿಯರು,ಬಡ ವೃದ್ಧೆಯರು,ಮಹಿಳೆಯರು,ಮಕ್ಕಳು ಅಶಕ್ತರು ಹೀಗೆ ಹೇಳುತ್ತಾ ಹೋದರೇ ಇಡೀ ಜಿಲ್ಲೆಯಲ್ಲಿ ಹಸಿವಿನಿಂದ ಬಳಲುತ್ತಿರುವವರ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ.
ಆದರೆ ರಾಜ್ಯ ಸರ್ಕಾರವಾಗಲಿ ಅಥವಾ ರಾಯಚೂರು ಜಿಲ್ಲಾಡಳಿತವಾಗಲಿ ಕೊರೊನಾ ಕನವರಿಕೆಯಲ್ಲಿ ಇವರನೆಲ್ಲಾ ಮರೆತು ಸೋಂಕಿತರ ಬೆನ್ನು ಬಿದ್ದಿದೆ.
ಅಂದ ಹಾಗೇ ಇದೇ ಜಿಲ್ಲೆಯ ಸಿಂಧನೂರು ನಗರದ ವಾರ್ಡ್ ನಂ ೨೮ ಹಿರೆಲಿಂಗೆಶ್ವರ್ ಕಾಲೋನಿಯಲ್ಲಿ ಊಟ ಸಿಗದೆ ಅಲೆಮಾರಿ ಬುಡಕಟ್ಟು ಜನರು ಹಾಸಿಗೆ ಹಿಡಿದಿದ್ದಾರೆ.
ಸುಮಾರು ೮೦ ಕುಟುಂಬಗಳು ವಾಸಿಸುತ್ತಿರುವ ಬಡಾವಣೆಯಲ್ಲಿ ಒಂದು ಊಟ ಸಿಗದೇ ಇಲ್ಲಿನವರು ಪರದಾಟ ನಡೆಸುತ್ತಿದ್ದು, ಊಟ ಇಲ್ಲದೆ ಹಲವಾರು ಜನರಿಗೆ ಕಾಯಿಲೆ ಬಂದು ಆರೋಗ್ಯ ಸಮಸ್ಯೆ ಉಂಟಾಗಿದೆ.
ಭಾರತದ ಲಾಕ್ ಡೌನ್ ಪರಿಣಾಮ ನಮಗೆ ಆಹಾರ ಅಗತ್ಯ ವಸ್ತುಗಳ ಕೊರತೆ ಇದ್ದು,ಒಂದು ಹೊತ್ತಿನ ಊಟ ಕೊಡಿ ಎಂದು ಮಾಡಿಕೊಂಡ ಮನವಿಯನ್ನ ಅದ್ಯಾಕೋ ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷಿಸಿರುವುದು ದುರಂತ.
ಒಟ್ಟಾರೆ ಊಟ ವಿಲ್ಲದೇ ಅಲೆಮಾರಿ ಬುಡಕಟ್ಟು ಜನಾಂಗದವರ ಪ್ರಾಣಕ್ಕೆ ಕುತ್ತು ಬಂದರೂ ಅನುಮಾನವಿಲ್ಲ,ಅದಕ್ಕಿಂತ ಮೊದಲೇ ರಾಯಚೂರು ಜಿಲ್ಲಾಡಳಿತ,ಸಿಎಂ ಯಡಿಯೂರಪ್ಪ ಎಚ್ಚೆತ್ತುಕೊಳ್ಳಬೇಕಾಗಿದೆ.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು (ರಾಯಚೂರು)

Please follow and like us:

Related posts

Leave a Comment