ಅಜ್ಜಿಗೆ ಅರಿವೇ ಚಿಂತೆ, ಶಾಸಕ ಮಸಾಲ ಜಯರಾಂನ ಬಾಡೂಟದ ಸಂತೆ..

ತುಮಕೂರು:ಅಜ್ಜಿಗೆ ಅರಿವೇ ಚಿಂತೆಯಾದ್ರೆ ತುಮಕೂರು ಜಿಲ್ಲೆಯ ತುರುವೇಕೆರೆ ಶಾಸಕ ಮಸಾಲ ಜಯರಾಂಗೆ ತನ್ನ ಹುಟ್ಟುಹಬ್ಬದ ಚಿಂತೆ..
ಸದ್ಯ ಕೊರೊನಾವನ್ನ ಹೇಗಪ್ಪಾ ಕಂಟ್ರೋಲ್ ಮಾಡೋದು ಅಂತಾ ಪ್ರಧಾನಿ ಮೋದಿ ಅವರಿಂದ ಹಿಡಿದು ಮುಖ್ಯಮಂತ್ರಿ ಯಡಿಯೂರಪ್ಪರವರೆಗೆ ಒದಾಡುತ್ತಿದ್ರೆ ಶಾಸಕ ಮಸಾಲ ಜಯರಾಂ ಮಾತ್ರ ಬಿಂದಾಸ್ ಆಗಿ ನೂರಕ್ಕೂ ಹೆಚ್ಚು ಮಂದಿಗೆ ಭರ್ಜರಿ ಬಾಡೂಟ ಹಾಕಿಸಿ ದೊಡ್ಡ ಘನಂಧಾರಿ ಕೆಲಸ ಮಾಡಿ ಬೀಗುತ್ತಿದ್ದಾರೆ.
ಅಂದ ಹಾಗೇ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿ ಇಡಗೂರು ಸರ್ಕಾರಿ ಶಾಲಾ ಆವರಣದಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ವೇಳೆ ನೂರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಆದರೆ ಕೊರೊನಾ ಬಂದಿರೋ ಈ ಟೈಮ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇವರೆಲ್ಲಾ ಬಾಡೂಟಕ್ಕೆ ಮುಗಿಬಿದ್ದಿದ್ದಾರೆ. ಜೊತೆಗೆ ಭರ್ಜರಿಯಾಗಿ ಬಿರಿಯಾನಿ ಊಟ ಸೇವಿಸಿ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ.
ಮೊದಲೇ ತುಮಕೂರು ಜಿಲ್ಲೆಯಲ್ಲಿ ಕೊರೊನಾಕ್ಕೆ ಓರ್ವ ಬಲಿಯಾಗಿದ್ದಾನೆ.ಜೊತೆಗೆ ಸೋಂಕಿತರ ಪಟ್ಟಿ ಕೂಡ ಚಿಕ್ಕದ್ದೇನಿಲ್ಲ..
ಇಂತಹ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕಾದ ತುರುವೇಕೆರೆ ಶಾಸಕ ಮಸಾಲ ಜಯರಾಂನಿAದಲೇ ನಿಯಮ ಉಲ್ಲಂಘನೆಯಾಗಿದೆ.
ಒಟ್ಟಾರೆ ಕರೋನಾ ಟೈಂನಲ್ಲಿ ಬೇಕಿತ್ತಾ ಶಾಸಕರೇ ಬಿರಿಯಾನಿ ಊಟ ಎಂದೆಲ್ಲಾ ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment