ಆರೋಗ್ಯ / HEALTH

ಮದ್ಯ ಪ್ರಿಯರೇ..ಏಪ್ರಿಲ್ 14ರ ನಂತ್ರವೂ `ಎಣ್ಣೆ ಅಂಗಡಿ ಓಪನ್’ ಆಗಲ್ಲ..

Published

on

ಕೋಲಾರ : ರಾಜ್ಯ ಸರ್ಕಾರ ಕೊನೆಗೂ ಮದ್ಯದಂಗಡಿಗಳನ್ನು ತೆರೆಯುವುದಿಲ್ಲ ಎಂದು ಹೇಳುವ ಮೂಲಕ ಕುಡುಕರಿಗೆ ಶಾಕ್ ನೀಡಿದೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಕಾರಿ ಸಚಿವ ಹೆಚ್. ನಾಗೇಶ್, ಏಪ್ರಿಲ್ ೧೪ ಲಾಕ್‌ಡೌನ್ ಮುಗಿದ ನಂತರವೂ ಮದ್ಯದ ಅಂಗಡಿಗಳು ತೆರೆಯುವುದು ಖಚಿತ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ದೆ.. ಲಾಕ್‌ಡೌನ್ ಅವಧಿ ಮುಗಿದ ನಂತರ ಸಿಎಂ ಜೊತೆ ಚರ್ಚೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು.ಜೊತೆಗೆ ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಎಣ್ಣೆ ಅಂಗಡಿಗಳನ್ನು ಸದ್ಯ್ಕಕೆ ತೆರೆಯುವ ಯಾವುದೇ ಶಿಫಾರಸನ್ನು ನಾನು ಸರ್ಕಾರಕ್ಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳನ್ನು ಸಂಪೂರ್ಣ ಮುಚ್ಚಲಾಗಿತ್ತು.ಇದಾದ ಬಳಿಕ ೭ ಮಂದಿ ಮದ್ಯ ಪ್ರಿಯರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದರು.ಈ ನಡುವೆ ಲಾಕ್‌ಡೌನ್ ಮುಗಿದು ಏಪ್ರಿಲ್ ೧೪ರ ನಂತರ ಮದ್ಯದ ಅಂಗಡಿಗಳು ತೆರೆಯಲಿವೆ ಎಂದು ಕುಡುಕರು ಕಾಯುತ್ತಿದ್ದರು. ಆದರೀಗ ಅಬಕಾರಿ ಸಚಿವ ಹೆಚ್. ನಾಗೇಶ್ ಮಧ್ಯ ಮಾರಾಟ ಮಾಡಲು ನಾನು ಸರ್ಕಾರಕ್ಕೆ ಶಿಪಾರಸು ಮಾಡಿಲ್ಲ. ಜನರ ಪ್ರಾಣಕ್ಕಿಂತ ಮಧ್ಯ ಮಾರಾಟ ಮುಖ್ಯವಲ್ಲ. ಹೀಗಾಗಿ ಕುಡಿಲೇಬೇಕೆಂದು ಸ್ನೇಹಿತರು ಹಠ ಹಿಡಿಯಬಾರದು ಎಂದು ಬುದ್ದಿಮಾತು ಹೇಳುವ ಮೂಲಕ ಏಪ್ರಿಲ್ ೧೪ರ ನಂತರವೂ ಮದ್ಯದ ಅಂಗಡಿಗಳು ತೆರೆಯುವುದು ಅಸಾಧ್ಯ ಎಂಬ ಸೂಚನೆಯನ್ನು ನೀಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೋಲಾರ

Click to comment

Trending

Exit mobile version