ಕರ್ನಾಟಕದಲ್ಲಿ ರೆಡ್, ಯೆಲ್ಲೋ, ಗ್ರೀನ್ ಜೋನ್ ಲಾಕ್‌ಡೌನ್

ಬೆಂಗಳೂರು: ರಾಜ್ಯದಲ್ಲಿ ಸೆಕೆಂಡ್ ಇನ್ನಿಂಗ್ಸ್ ಲಾಕ್‌ಡೌನ್‌ಗೆ ಜನರು ಸಿದ್ಧವಾಗಬೇಕಾಗಿದೆ.
ಸದ್ಯ ಈ ಬಾರಿಯ ಲಾಕ್‌ಡೌನ್ ನಿಯಮಗಳು ಇನ್ನಷ್ಟು ಕಠಿಣವಾಗಲಿದ್ದು,ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸರು ಅನಗತ್ಯವಾಗಿ ಬೀದಿಗಿಳಿಯವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಅಂದ ಹಾಗೇ ಬೆಂಗಳೂರಿನಲ್ಲಿ ಲಾಕ್‌ಡೌನ್ ನಿಯಮ ಘನಘೋರವಾಗಿದ್ದು,ಇಂದಿನಿAದಲೇ ಪೊಲೀಸರು ಹಲವು ರಸ್ತೆಗಳು, ಮೇಲ್ಸುತೆವೆಗಳನ್ನು ಸಂಚಾರ ನಿರ್ಬಂಧಿತಗೊಳಿಸುತ್ತಿದ್ದಾರೆ.ಅಲ್ಲದೆ,ಅನಗತ್ಯವಾಗಿ ಬೈಕ್ ಸವಾರರು ಹೊರ ಬಂದರೇ ಅವರ ಬೈಕ್ ಸಿಜ್ ಮಾಡಲು ಖಾಕಿ ಟೀಂ ಮುಂದಾಗಿದೆ.
ಇನ್ನು ರಾಜ್ಯದಲ್ಲೂ ಲಾಕ್‌ಡೌನ್ ರೂಲ್ಸ್ ಇನ್ನುಷ್ಟು ಕಠಿಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು,ಅಗತ್ಯ ವಸ್ತುಗಳ ಖರೀದಿಗೆ ಇನ್ನಷ್ಟು ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಇನ್ನು ೧೯ ದಿನಗಳ ಕಾಲ ಕರ್ನಾಟಕವನ್ನು ಸಂಪೂರ್ಣ ಬಂದ್ ಆಗಲು ಏನೂ ಬೇಕೋ ಆ ಕ್ರಮವನ್ನು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವ ಪರಿಣಾಮ ಇಂದಿನಿAದಲೇ ರಾಜ್ಯದ ಎಲ್ಲಾ ಕಡೆ ಲಾಕ್‌ಡೌನ್ ಇನ್ನಷ್ಟು ಬಿಗಿಗೊಳಿಸಲು ಡಿಸಿ,ಎಸ್ಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬಸ್,ರೈಲು,ಮೈಟ್ರೋ ರೈಲು,ವಿಮಾನ ಸಂಚಾರ ಸ್ಥಗಿತಗೊಳ್ಳಲಿದ್ದು,ಪಬ್,ಬಾರ್,ಶಿಕ್ಷಣ ಸಂಸ್ಥೆಗಳು ಬಂದ್ ಆಗಲಿದ್ದು,ಕ್ರೀಡೆ,ರಾಜಕೀಯ ಕಾರ್ಯಕ್ರಮಗಳಿಗೆ ಬ್ರೇಕ್ ಬೀಳಲಿದೆ.ಆದರೆ ಪೆಟ್ರೋಲ್ ಬಂಕ್‌ಗಳು ಮಾತ್ರ ಎಂದಿನAತೆ ಕಾರ್ಯನಿರ್ವಹಿಸಲಿದೆ.
ಇದರ ನಡುವೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ರೆಡ್, ಯೆಲ್ಲೋ, ಗ್ರೀನ್ ಜೋನ್ ನಂತಹ ೩ ವಿಧದ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ರೆಡ್ ಜೋನ್‌ಗಳು ಸಂಪೂರ್ಣ ಸೀಲ್‌ಡೌನ್ ಆಗಲಿದ್ದು,ಈಗಾಗಲೇ ಬೆಂಗಳೂರಿನ ೨ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.ಉಳಿದಂತೆ ಯೆಲ್ಲೋ ಜೋನ್‌ಗಳು ಸಂಪೂರ್ಣ ಲಾಕ್‌ಡೌನ್ ಆಗಲಿದ್ದು, ಗ್ರೀನ್ ಜೋನ್‌ಗಳು ಸಂಚಾರ ನಿರ್ಬಂಧಿತ ವಲಯಗಳಾಗಲಿವೆ.ಅಲ್ಲದೆ,ಗಡಿ,ರಸ್ತೆಗಳನ್ನು ಈಗಾಗಲೇ ಸೀಲ್ ಮಾಡಲಾಗಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment