ಮದ್ಯ ಕದ್ದ ಬಾರ್ ಮಾಲೀಕನ ಮಗ ಅಂದರ್..

ಲಿ0ಗಸೂಗೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಯಲಿದ್ದ ಮದ್ಯವನ್ನು ಬಾರ್ ಮಾಲೀಕನ ಮಗನೇ ಕದ್ದ ಪ್ರಸಂಗವೊAದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಹಟ್ಟಿ ಪಟ್ಟಣದ ಹಟ್ಟಿ ಪಟ್ಟಣದಲ್ಲಿರುವ ಕೋಯಿನೂರ್ ಬಾರ್ ಸೀಲ್ ಆಗಿತ್ತು.ಆದರೆ ಬಾರ್ ಮಾಲೀಕನ ಮಗ ಜಿಯಾ ಹುಸೇನ್ ಸೀಲ್ ಆಗಿದ್ದ ಬಾರ್ ಹಿಂದಿನ ಬಾಗಿಲಿನಿಂದ ಬಂದು ಕಳ್ಳತನ ಮಾಡಿದ್ದಾನೆ.
ಇನ್ನು ಈ ವಿಷಯ ತಿಳಿದ ಹಟ್ಟಿ ಚಿನ್ನದ ಗಣಿ ಠಾಣೆ ಪೊಲೀಸರು, ಜಿಯಾ ಹುಸೇನ್ ಹಾಗೂ ಕೆಲಸಗಾರರಾದ ಚಿರಂಜೀವಿ, ವೆಂಕಟೇಶ್ ವಿರುದ್ದ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿ ೧ ಲಕ್ಷ ೫ ಸಾವಿರದ ೬೫೦ ರೂಪಾಯಿ ನಗದು ಹಾಗೂ ೨,೭೫೦ ರೂ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಈ ಸಂಬAಧ ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸದ್ಯ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು (ರಾಯಚೂರು)

Please follow and like us:

Related posts

Leave a Comment