ಬಾಡಿ ಹೋದ 3 ಎಕರೆ ಹೂವಿನ ತೋಟ

ತಾಳಿಕೋಟೆ: ಕೋರೊನಾ ಹಿನ್ನಲೆಯಲ್ಲಿ ಬೇಡಿಕೆ ಇಲ್ಲದೆ ಪಟ್ಟಣದ ರೈತ ಡೊಂಗರಿಸಾಬ್ ಬೀಳಗಿಗೆ ಸೇರಿದ ೩ ಎಕರೆ ತೋಟದಲ್ಲಿ ಬೆಳೆದ ನೂರಾರು ಕೆಜಿ ಗಲಾಟೆ ಹೂ ಬಾಡಿ ಹೋಗಿದೆ.
ಯುಗಾದಿ ಮುಗಿಯಿತೆಂದರೆ ನಿತ್ಯ ಮದುವೆ ಹಾಗೂ ಇತರೆ ಸಮಾರಂಭಗಳು ನಡೆಯುತ್ತಿದ್ದವು.ಈ ಸಂದರ್ಭದಲ್ಲಿ ಗಲಾಟೆ ಹೂಗಳಿಗೆ ಬೇಡಿಕೆ ಇರುತ್ತಿತ್ತು.
ಸದ್ಯ ಲಾಕ್‌ಡೌನ್‌ನಿಂದ ಎಲ್ಲ ಸಮಾರಂಭಗಳು ಮುಂದೂಡಿಕೆಯಾಗಿದ್ದು,ಇದರ ಹಿನ್ನೆಲೆಯಲ್ಲಿ ಹೂಗಳನ್ನು ಕೊಳ್ಳುವವರಿಲ್ಲದೆ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಇನ್ನು ಬೆಳೆದ ಹೂ ತೋಟದಲ್ಲೇ ಕೊಳೆತು ಹೋಗುತ್ತಿವೆ.ಪರಿಣಾಮ ಅದನ್ನೇ ನಂಬಿಕೊAಡ ರೈತರಿಗೆ ದಿಕ್ಕೆ ತೋಚದಂತಾಗಿದ್ದು,ಬೆಳೆದ ಬೆಳೆಗೂ ಸರಿಯಾದ ಮಾರುಕಟ್ಟೆಯಿಲ್ಲದೆ ಕಂಗಾಲಾಗಿದ್ದಾನೆ.
ಇದಲ್ಲದೆ,ಹೂಗಳಿಗೆ ನೀರು ಸಿಂಪಡಿಸಿ ಕಷ್ಟಪಟು ಹೂಗಳನ್ನು ಬೆಳೆಸಿದ್ದ ರೈತನಿಗೆ ದಿನನಿತ್ಯ ೨-೩ ಸಾವಿರದವರೆಗೆ ಲಾಭವಾಗುತ್ತಿತು.ಆದರೆ ಲಾಕ್‌ಡೌನ್‌ನಿಂದ ಈಗ ಅದು ಇಲ್ಲದಂತಾಗಿದ್ದು, ಮಾರುಕಟ್ಟೆ ಇಲ್ಲದೆ ಹೂಗಳು ಒಣಗಿ ಹೋಗಿವೆ

ಶಾಂತಗೌಡ ಪಾಟೀಲ್ ಎಕ್ಸ್ ಪ್ರೆಸ್ ಟಿವಿ ತಾಳಿಕೋಟೆ(ವಿಜಯಪುರ)

Please follow and like us:

Related posts

Leave a Comment