ಮದ್ಯಪ್ರಿಯರಿಗೆ ಬುಧವಾರವೇ ಸಿಗಲಿದೆ ಎಣ್ಣೆ?

ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ಮದ್ಯ ಮಾರಾಟ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಅAದ ಹಾಗೆ ರಾಜ್ಯದಲ್ಲಿ ರಾಜ್ಯದಲ್ಲಿ ಮದ್ಯ ಸಿಗದೇ ಕೆಲವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.
ಇನ್ನು ನಾಳೆ ಅಂಬೇಡ್ಕರ್ ಜಯಂತಿ ಇದೆ. ಹೀಗಾಗಿ ಅಂಬೇಡ್ಕರ್ ಜಯಂತಿ ಮುಗಿದ ನಂತರ ಮದ್ಯ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ಹೀಗಾಗಿ ಎಂಎಸ್‌ಐಎಲ್ ಮೂಲಕ ಬುಧವಾರದಿಂದ ಮದ್ಯ ಮಾರಾಟ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಇನ್ನು ಏಪ್ರಿಲ್ ೧೪ರ ನಂತರ ಈ ಮದ್ಯ ಮಾರಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಎನ್ನುವ ಮೂಲಕ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.
ಇದಲ್ಲದೆ, ಮದ್ಯವನ್ನು ಕೌಂಟರ್‌ನಲ್ಲಿ ಸೇವಿಸಲು ಅವಕಾಶವಿಲ್ಲ, ಕೇವಲ ಪಾರ್ಸೆಲ್ ಪಡೆಯಬಹುದಾಗಿದೆ, ಟೇಕ್ ಅವೇ ವ್ಯವಸ್ಥೆ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗುತ್ತಿದೆ, ಇತರ ವೈನ್ ಸ್ಟೋರ್ ಗಳಿಗೂ ಟೇಕ್ ಅವೇ ವ್ಯವಸ್ಥೆ ಮದ್ಯ ಮೂಲಕ ಮಾರಾಟಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment