ಅಕಾಲಿಕ ಮಳೆ,ಬೆಳೆ ಹಾನಿ,ಅಧಿಕಾರಿಗಳ ಪರಿಶೀಲನೆ

ಸಿಂಧನೂರು: ತಾಲ್ಲೂಕಿನ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಭತ್ತ ನಷ್ಟವಾಗಿದೆ.
ಇದರ ಹಿನ್ನೆಲೆಯಲ್ಲಿ ತಾಲ್ಲೂಕಿನ ತಿಡಿಗೋಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರೈತರ ಸಮ್ಮುಖದಲ್ಲಿ ಮಾಟೂರು ಕಾನಿಹಳ ಉಪ್ಪಲದೊಡ್ಡಿ ಶ್ರೀನಿವಾಸ್ ಕ್ಯಾಂಪ್ ಭಾಗಗಳಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿದ್ದಾರೆ.
ಇನ್ನು ಬೆಳೆ ಹಾನಿ ವೀಕ್ಷಣೆ ನಂತರ ಅಧಿಕಾರಿಗಳು ಈ ಸಂಬAಧ ವರದಿಯನ್ನು ತಹಶೀಲ್ದಾರ್,ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಕಳುಹಿಸಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಇದಲ್ಲದೆ, ಬೆಳೆದ ಬೆಳೆ ನಷ್ಟವಾಗಿದ್ದು ಆದಷ್ಟು ಬೇಗನೆ ಪರಿಹಾರ ಒದಗಿಸಲು ರೈತರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದರು.

ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು (ರಾಯಚೂರು)

Please follow and like us:

Related posts

Leave a Comment