ಇವತ್ತಿನಿಂದ ಮತ್ತಷ್ಟು ಕಠಿಣ ಕ್ರಮ, ಮದ್ಯ ಮಾರಾಟ ಸದ್ಯಕ್ಕಿಲ್ಲ..

ಬೆಂಗಳೂರು:ಮೇ.೩ರವರೆಗೂ ಭಾರತ ಲಾಕ್‌ಡೌನ್ ಮುಂದುವರೆಸುವ ಪ್ರಧಾನಿ ನರೇಂದ್ರ ಮೋದಿ ಆದೇಶ ಸ್ವಾಗತಿಸಿರುವ ಸಿಎಂ ಯಡಿಯೂರಪ್ಪ, ಲಾಕ್‌ಡೌನ್‌ನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತದೆ ಅಂತ ತಿಳಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು,ನಾಳೆ ಪ್ರಧಾನಿ ಮಾರ್ಗಸೂಚಿ ಪ್ರಕಟ ಮಾಡುತ್ತಾರೆ.ಹೀಗಾಗಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುತ್ತೇವೆ ಅಂತ ಮಾಹಿತಿ ನೀಡಿದ್ರು..
ಇದುವರೆಗೂ ೫೭೬೩೩ ವಾಹನಗಳು ಸೀಜ್ ಮಾಡಿ ೨೧೮೧ ಜನರ ಮೇಲೆ ಎಫ್‌ಐಆರ್ ೮೫ ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಇವತ್ತಿಂದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತದೆ.ಇವತ್ತಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿ ಮಾಡುತ್ತೇವೆ.
ಮೇ ೩ ರ ನಂತರ ಎಲ್ಲಾ ಚಟುವಟಿಕೆಗಳು ನಡೆಯಬೇಕು ಎಂಬುದು ನಮ್ಮ ಆಶಯ.ಹೀಗಾಗಿ ಮೇ ೩ ರೊಳಗೆ ಕೊರೊನಾ ಕಂಟ್ರೋಲ್ ಆಗಬೇಕು ಅಷ್ಟೇ ಅಂತ ತಿಳಿಸಿದ್ರು..
ಮದ್ಯ ಮಾರಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಎಲ್ಲಾ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳಂತೆ ಮಾಡಲಾಗುತ್ತದೆ, ಮಾರ್ಗ ಸೂಚಿಗಳ ಪ್ರಕಟ ನಂತರ ಮದ್ಯ ಮಾರಾಟದ ತೀರ್ಮಾನ ಕೈಗೊಳ್ತೇವೆ ಅಂತ ಸ್ಪಷ್ಟಪಡಿಸಿದ್ರು..

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment