ಬಾಗಲಕೋಟೆ ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಡೊಂಟ್‌ಕೇರ್..

ಬಾಗಲಕೋಟೆ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ.ಜೊತೆಗೆ ಲಾಕ್‌ಡೌನ್‌ಗೂ ಜನರು ಬೆಲೆ ಕೊಡದೇ ಹೊರಗಡೆ ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ.
ಸದ್ಯ ಬಾಗಲಕೋಟೆ ಜಿಲ್ಲೆಯಲ್ಲೂ ಕೂಡ ಇದೇ ವಾತಾವರಣ ಕಂಡು ಬಂದಿದ್ದು,ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಲಾಕ್‌ಡೌನ್‌ಗೆ ಕ್ಯಾರೆ ಎನ್ನದ ಜನರು ಅನಾವಶ್ಯಕವಾಗಿ ತಿರುಗಾಟ ನಡೆಸಿದ್ದಾರೆ.
ಅದರಲ್ಲೂ ತರಕಾರಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳ ಖರೀದಿಗಾಗಿ ಜನರು ಮುಗಿಬಿದ್ದು,ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸಿದ್ದಾರೆ.
ಸದ್ಯ ಕಳೆದ ೮ ದಿನಗಳಿಂದ ಒಂದೊAದಾಗಿ ಅಂಗಡಿಗಳು ಓಪನ್ ಆಗುತ್ತಿರುವ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಿದ್ದು,ಇದರ ಬಗ್ಗೆ ಪೊಲೀಸರು ದಿವ್ಯ ಮೌನ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಬಾದಾಮಿ ತಾಲೂಕು ಆಡಳಿಯ ಇದಕ್ಕೂ ನಮಗೂ ಯಾವುದೇ ಸಂಬAಧವಿಲ್ಲದAತೆ ವರ್ತನೆ ತೋರಿದ್ದು,ಮುಂದಾಗುವ ಅನಾಹುತಕ್ಕೆ ಹೊಣೆಯಾಗಿ ನಿಲ್ಲಬೇಕಾಗುತ್ತದೆ.

ಶ್ರೀಧರ್ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment