ಕೊರಾನಾ ಅಟ್ಟಹಾಸದಿಂದ ತತ್ತರಿಸಿದ ಮಳವಳ್ಳಿ..

ಮಳವಳ್ಳಿ: ದೇಶ ವ್ಯಾಪ್ತಿ ಕೊರೊನಾ ಹರಡುತ್ತಿರುವ ಹಿನ್ನೆಲ್ಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೨೯ನೇ ಜಯಂತಿಯನ್ನು ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಅಚರಣೆ ಮಾಡಲಾಯಿತು.
ಅಂದ ಹಾಗೇ ಶಾಸಕ ಡಾ.ಕೆ.ಅನ್ನದಾನಿ ಡಾ.ಬಿ.ಆರ್.ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು,ತಾಲ್ಲೂಕಿನಲ್ಲಿ ಕೊರಾನಾ ಮಹಾಮಾರಿ ಅಟ್ಟಹಾಸದಿಂದ ತತ್ತರಿಸಿದ್ದು, ಇದರಿಂದ ಹೊರ ಬರಬೇಕಾಗಿದೆ ಅದಕ್ಕಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸೂರಜ್,ತಹಸೀಲ್ದಾರ್ ಚಂದ್ರಮೌಳಿ, ತಾ.ಪಂ ಇಓ ಸತೀಸ್ ಹಾಗೂ ತಾಲ್ಲೂಕು ಆಡಳಿತದ ಸಿಬ್ಬಂದಿಗಳು ಭಾಗವಹಿಸಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ (ಮಂಡ್ಯ)

Please follow and like us:

Related posts

Leave a Comment